ಅಟಲ್ ವಿರಾಸತ್ ಜನ್ಮ ಶತಾಬ್ದಿ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕೋಲೋಡಿ ಕಾಲೋನಿಯಲ್ಲಿ ಸುಮಾರು 75 ಮನೆಗಳಿಗೆ ಕಿಟ್ ನೀಡುವುದರ ಮೂಲಕ ಧಾರ್ಮಿಕ ಮುಖಂಡರು ಯುವ ನಾಯಕರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಅಟಲ್ ಜೀ ಅವರ ಜನ್ಮ ಶತಾಬ್ದಿಯನ್ನು ಬಹಳ ವಿಶಿಷ್ಟವಾಗಿ ಆಚರಿಸಿದರು. ಹಾಗೂ ಊರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ಪ್ರಾರ್ಥನೆ ಮಾಡಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಕಾಲೋನಿಯ ಹಿರಿಯ ಮುಖಂಡರು ಮಂಜಪ್ಪ MK ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯ ಬಾಬು ಗೌಡ ಪರ್ಪಳ, ಬಿ. ಎಮ್. ಎಸ್ ಜಿಲ್ಲಾ ಅಧ್ಯಕ್ಷರು, ವಕೀಲರಾದ ಅನಿಲ್ ಕುಮಾರ್, ಸಂಘದ ಪ್ರಮುಖರಾದ ಸುದರ್ಶನ್ ವಿ ಕನ್ಯಾಡಿ, ಲೋಕಯ್ಯ ಗೌಡ ನೆರಿಯ, ನಿತ್ಯಾನಂದ ಗೌಡ ನೆರಿಯ, ಯುವ ವಕೀಲ ನರೇಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ನಾವೂರು ಶಕ್ತಿ ಕೇಂದ್ರ ಅಧ್ಯಕ್ಷ ಪ್ರದೀಪ್ ನಾಗಜೆ, ಕುಮಾರ್ ನಾಥ ನಿಡಿಗಲ್, ಭರತ್ ಗೌಡ ಕುಪ್ಪೆಟ್ಟಿ, ಪ್ರಜಿತ್ ಕೊಯ್ಯುರು, ಹಾಗೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

