ಸುರತ್ಕಲ್ ಕೃಷ್ಣಾಪುರ: ಧರ್ಮದೈವ ಪರಿವಾರ ದೈವಗಳ ಕುಲಾಲ್ ಸಾಲಿಯಾನ್ ಕುಟುಂಬ ಕೃಷ್ಣಾಪುರ ಇವರ ತರವಾಡು ಮನೆಯ ಶಿಲಾನ್ಯಾಸ ಕಾರ್ಯಕ್ರಮವು ವಾಸ್ತುಶಿಲ್ಪಿ ಶ್ರೀ ಪ್ರಸನ್ನ ಭಟ್ ಮುಲಿಯಾಳ ಇವರ ವಾಸ್ತುಶಿಲ್ಪದ ಮಾರ್ಗದರ್ಶನದೊಂದಿಗೆ ಭೂ ಪರಿಗ್ರಹ ಹೋಮ ಮತ್ತು ಶಿಲಾನ್ಯಾಸ ಕಾರ್ಯಕ್ರಮವು ತಾರೀಕು 15 11 2025 ರಂದು ಕುಟುಂಬದ ಎಲ್ಲಾ ಸದಸ್ಯರೊಂದಿಗೆ ನಡೆಸಲಾಯಿತು.

ತುಳುನಾಡ ಸೀಮೆಯ ಪ್ರಧಾನ ತಂತ್ರಿಗಳಾದ ನೀಲೇಶ್ವರ ಅರವತ್ತ್ ಬ್ರಹ್ಮಶ್ರೀ ಪದ್ಮನಾಭ ತಂತ್ರಿಯವರಿಂದ ಭೂ ಪರಿಗೃಹ ಹೋಮ ಮತ್ತು ಶಿಲಾನ್ಯಾಸ ಕಾರ್ಯಕ್ರಮವು ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಇವರ ದಿವ್ಯ ಹಸ್ತದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಶೇಖರ್ ಸಾಲಿಯಾನ್, ಕುಟುಂಬದ ಹಿರಿಯರಾದ ಬಾಬು ಸಾಲಿಯಾನ್, ಗಣೇಶ ದಂಪತಿಗಳು ಮತ್ತು ನಿಕಟ ಪೂರ್ವ ಮನಪಾ ಸದಸ್ಯರಾದ ಲಕ್ಷ್ಮೀಶೇಖರ್ ದೇವಾಡಿಗ ಮತ್ತು ಶ್ವೇತ ಪೂಜಾರಿ, ಬದಿಯಡ್ಕ ಕ್ಷೇತ್ರದ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಭವಾನಿ ಸಾಲಿಯಾನ್ ಸ್ವಾಗತಿಸಿದರು ಪ್ರವೀಣ್ ಸಾಲಿಯಾನ್ ಪ್ರಸ್ತಾಪ ಮಾಡಿದರು. ರಮೇಶ್ ಸಾಲಿಯಾನ್ ನಿರೂಪಣೆ ಮಾಡಿದರು ಶ್ರೀನಿವಾಸ್ ಧನ್ಯವಾದ ಸಮರ್ಪಣೆ ಮಾಡಿದರು

