ಧರ್ಮಸ್ಥಳ ಲಕ್ಷದೀಪೋತ್ಸವ: ಭಕ್ತರಿಂದ ವೈವಿಧ್ಯಮಯ ಸೇವೆ

0
23

*ಬೆಂಗಳೂರಿನ ರಾಮು ಮತ್ತು ರಮೇಶ ಅವರ ತಂಡದ ಹೂವಿನ ವ್ಯಾಪಾರಿಗಳು ವಿವಿಧ ಜಾತಿಯ ಹೂವುಗಳನ್ನು ತಂದು ದೇವಸ್ಥಾನವನ್ನು ಆಕರ್ಷಕವಾಗಿ ಅಲಂಕರಿಸಿದ್ದಾರೆ.
*ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಭಕ್ತಾದಿಗಳು ಸುಮಾರು ೨೫ ತಂಡದವರು ಸೇರಿ ಬುಧವಾರ ರಾತ್ರಿ ಎಲ್ಲಾ ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದರು.
ಮುದ್ದೆ-ಕಾಳುಸಾರು, ಪಲಾವ್, ಬಿಸಿಬೇಳೆಬಾತ್, ರೈಸ್‌ಬಾತ್, ಹೋಳಿಗೆ, ಮೈಸೂರುಪಾಕ್ ಹಾಗೂ  ಮೊದಲಾದವುಗಳೊಂದಿಗೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಶುಚಿ-ರುಚಿಯಾದ ಊಟದ ವ್ಯವಸ್ಥೆ ಮಾಡಿದರು.

ಕಂಚಿಮಾರುಕಟ್ಟೆ ಉತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂದರ್ಭ ಶನಿವಾರ ರಾತ್ರಿ ಕಂಚಿಮಾರುಕಟ್ಟೆ ಉತ್ಸವ ನಡೆಯಿತು.
ಸಾವಿರಾರು ಭಕ್ತರು ಶ್ರದ್ಧಾ-ಭಕ್ತಿಯಿಂದ ಉತ್ಸವ ವೀಕ್ಷಿಸಿ ಧನ್ಯತೆಯನ್ನು ಹೊಂದಿದವರು.

LEAVE A REPLY

Please enter your comment!
Please enter your name here