ದೊಡ್ಡನಗುಡ್ಡೆ ಪಂಚ ಜುಮಾದಿ ದೈವಸ್ಥಾನದ ತಂಬಿಲ ಸೇವೆ – 2025

0
79

ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ದೊಡ್ಡನಗುಡ್ಡೆ ಪಂಚ ಜುಮಾದಿ ದೈವಸ್ಥಾನ ವರ್ಷಂ ಪ್ರತಿ ನಡೆಯುವಂತ
ಕೊಡಿ ತಿಂಗಳ ತಂಬಿಲ ಸೇವೆ ದಿನಾಂಕ 23/11/2025 ಆದಿತ್ಯವಾರದಂದು ಸಂಜೆ 6 ಗಂಟೆಗೆ ಸರಿಯಾಗಿ ಜರಗಿತ್ತು.

ಈ ಒಂದು ಸಂದರ್ಭದಲ್ಲಿ ದೈವ ಪಂಚ ಜುಮಾದಿ ಹಾಗೂ ಬಂಟ ದೈವದ ದರ್ಶನ್ ಸೇವೆ ಇತ್ತು. ತದನಂತರ ರಾತ್ರಿ 9:30ಕ್ಕೆ ಸರಿಯಾಗಿ ತಂಬಿಲದ ಅನ್ನಪ್ರಸಾದ ಸೇವೆಯಲ್ಲಿ ಗ್ರಾಮದ ಸದ್ಭಕ್ತರು ಸುಮಾರು 1000ಕ್ಕೂ ಹೆಚ್ಚು ಭಕ್ತರು ಉಪಸ್ಥಿತಿ ಇದ್ದರು. ಈ ಒಂದು ಪುಣ್ಯದ ಕಾರ್ಯದಲ್ಲಿ ಊರಿನ ಹಾಗೂ ಪರ ಊರಿನ ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here