ಕಟೀಲು : ದುರ್ಗಾನಗರ ಫ್ರೆಂಡ್ಸ್ ಕ್ಲಬ್ (ರಿ) ಕೊಂಡೇಲ – ಕಟೀಲು ಇವರ ಆಶ್ರಯದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾ ಕೂಟದ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ ಲಕ್ಷ್ಮೀನಾರಾಯಣ ಆಸ್ರಣ್ಣ ನೆರವೇರಿಸಿದರು.

ಈ ಸಂದರ್ಭ ಕರಾಟೆ ಶಿಕ್ಷಕ ಈಶ್ವರ್ ಕಟೀಲ್, ರಂಜಿತ್ ಪೂಜಾರಿ ತೋಡಾರು, ಪ್ರೀತಮ್ ಬಂಗೇರ, ನಿತಿನ್ ಶೆಟ್ಟಿ ಗುತ್ತಿನಾರ್ ಕೊಡೆತ್ತೂರುಗುತ್ತು, ಲೋಕಯ್ಯ ಸಾಲ್ಯಾನ್ ಕೊಂಡೇಲ, ಕಿರಣ್ ಕುಮಾರ್ ಶೆಟ್ಟಿ ಹೊಸಮನೆ , , ಗಣೇಶ್ ಆಚಾರ್ಯ ಮಲ್ಲಿಗೆಯಂಗಡಿ, ಸೀನ ಪೂಜಾರಿ ಐಕಳ, ಪ್ರಶಾಂತ್ ಪೂಜಾರಿ ಕೆಂಜಾರ್ ಕಾನ, ಕಿರಣ್ ಪೂಜಾರಿ ಎಕ್ಕಾರ್, ಗಣೇಶ್ ಪೂಜಾರಿ ಬಜಪೆ, ಸುಮಂತ್ ಸುವರ್ಣ ಬೆದ್ರ, ಡಾ.ಶಶಿ ಕುಮಾರ್ ಕಟೀಲ್, ಸದಾಶಿವ ಶೆಟ್ಟಿ ಅಜಾರು, ಸೂರಜ್ ಕೊಂಡೇಲ, ಶಿವಾನಂದ ಪೂಜಾರಿ ದುರ್ಗಾನಗರ ಮತ್ತಿತರರು ಗಣ್ಯರು ಉಪಸಿದ್ಧರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಶಶಿಕುಮಾರ್ ಕಟೀಲ್ , ಚಲನಚಿತ್ರ ನಟ ಹಾಗೂ ಉದ್ಯಮಿ ಮಂಜುನಾಥ್ ಚೆರ್ಕಡಿ, ವೆಯ್ಟ್ ಲಿಫ್ಟಿಂಗ್ ದಿಶಾ ಪೂಜಾರಿ ಕಾಪಿಕಾಡ್ ಮತ್ತು ಕೀರ್ತನ್ ಕಟೀಲ್ ಇವರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ದುರ್ಗಾ ನಗರ ಫ್ರೆಂಡ್ಸ್ ಕ್ಲಬ್ (ರಿ.)ಕಟೀಲು ಇದರ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

