ಕಡಂದಲೆಯಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ

0
128

ಮೂಡುಬಿದಿರೆ : ಪಶು ಸಂಗೋಪನೆಗಾಗಿ ಹಲವಾರು ಯೋಜನೆಗಳು ಸರ್ಕಾರದಿಂದ ಸಿಗುತ್ತದೆ. ಅವುಗಳ ಬಗ್ಗೆ ಹೈನುಗಾರರಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ನೀಡುವುದು ಅಗತ್ಯ. ಅಂತಹ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ಕೆ.ಎಂ.ಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಹೇಳಿದರು. ಕಡಂದಲೆ ಪಲ್ಕೆ ಆಟದ ಮೈದಾನದಲ್ಲಿ ಸೋಮವಾರ ನಡೆದ ದ.ಕ ಜಿಲ್ಲಾ ಪಂಚಾಯಿತಿ ಮಂಗಳೂರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶು ಆಸ್ಪತ್ರೆ , ಕಡಂದಲೆ ಹಾಲು ಉತ್ಪಾದಕರ ಸಹಕಾರಿ ಸಂಘ ಕಡಂದಲೆ, ಗ್ರಾಪಂ ಪಾಲಡ್ಕ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಶುಪಾಲನಾ ಮತ್ತು ಪರುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ(ಆಡಳಿತ) ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಕಾರ್ಯಕ್ರಮ ಉದ್ಘಾಟಿಸಿದರು, ಪಾಲಡ್ಕ ಗ್ರಾಪಂ ಅಧ್ಯಕ್ಷೆ ಅಮಿತಾ ನಾಯ್ಕ್ ಅಧ್ಯಕ್ಷತೆವಹಿಸಿದರು. ಉಪಾಧ್ಯಕ್ಷ ಪ್ರವೀಣ್ ಸಿಕ್ವೇರಾ, ಮಾಜಿ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಪಶು ವೈದ್ಯಕೀಯ ಇಲಾಖೆಯ ಡಾ. ಮಲ್ಲಿಕಾರ್ಜುನ, ಡಾ.ಶೀತಲ್, ಡಾ. ಗುರುರಾಜ್, ಮಂಜಯ್ಯ, ಸುಭಾಸ್, ರಮೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಹುಮಾನ ವಿಜೇತರು: ಕರುವಿಭಾಗ- ಸುಧಾಕರ ನಾಯ್ಕ್ ಕಡಂದಲೆ( ಪ್ರಥಮ), ಸುಜಾತ ಎನ್.ಶೆಟ್ಟಿ ವರ್ಣಬೆಟ್ಟು(ದ್ವಿತೀಯ), ವಿಶ್ವಾಸ್ ವರ್ಣಬೆಟ್ಟು(ತೃತೀಯ)
ಕಡಸು ವಿಭಾಗ: ಕೇಶವ ಶೆಟ್ಟಿ ಕಡಂದಲೆ(ಪ್ರಥಮ), ಸೂರಜ್ ಕಡಂದಲೆ( ದ್ವಿತೀಯ), ಸುಲೋಚನಾ ವರ್ಣಬೆಟ್ಟು(ತೃತೀಯ) ಹಾಗೂ ಪ್ರದರ್ಶನದಲ್ಲಿ ಭಾಗವಹಿಸಿದವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

LEAVE A REPLY

Please enter your comment!
Please enter your name here