ಅರಸಮ್ಮನಕಾನಿನ ಸಾಂತನಮಕ್ಕಿ ಗದ್ದೆ ಯಲ್ಲಿ ಕೆಸರು ಗದ್ದೆ(ಗೊಂಸ್ರ್ ಗೆದ್ದಿ -2026) ಗ್ರಾಮೀಣಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

0
6

ಜಿಲ್ಲಾ ಪ್ರಶಸ್ತಿ ಪುರಸ್ಕೃತ ನವಶಕ್ತಿ ಯುವಕ ಮಂಡಲ (ರಿ.) ಅರಸಮ್ಮನಕಾನು ಹಾಗೂ ಲಯನ್ಸ್ ಹಾಗೂ ಲಿಯೋ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿಯವರ ವತಿಯಿಂದ ದಿನಾಂಕ :02/08/2026 ರಂದು ಅರಸಮ್ಮನಕಾನಿನ ಸಾಂತನಮಕ್ಕಿ ಗದ್ದೆ ಯಲ್ಲಿ ಕೆಸರು ಗದ್ದೆ(ಗೊಂಸ್ರ್ ಗೆದ್ದಿ -2026) ಗ್ರಾಮೀಣಮಟ್ಟದ ಕೆಸರು ಗೆದ್ದ ಕ್ರೀಡಾಕೂಟ ಜರಗಿತು.

ಕ್ರೀಡಾಕೂಟದಲ್ಲಿ ಸುಮಾರು 450ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಮಕ್ಕಳಿಗೆ ಪುರುಷರಿಗೆ ಮಹಿಳೆಯರಿಗೆ ವಿವಿಧ ಗ್ರಾಮೀಣ ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಥಮ ದ್ವಿತೀಯ ಬಂದ ಸ್ಪರ್ಧಾಳುಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಕ್ರೀಡಾಕೂಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಶಕ್ತಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ ಹೆಗ್ಡೆಯವರು ವಹಿಸಿದ್ದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್ ಜಯರಾಮ್ ಶೆಟ್ಟಿ ಅವರು ಕೆಸರು ಗೆದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ, ಈ ಭಾಗದಲ್ಲಿ ಒಂದು ಸಕ್ರಿಯವಾದ ಯುವಕರ ತಂಡ ಇದ್ದುಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ,ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಿಂದುಳಿದ ವರ್ಗದವರ ಸಹಾಯಕ್ಕೆ ನಿಂತು ಸಹಕರಿಸುವ ಒಂದು ಯುವಕಮಂಡಲ ಇದ್ದರೆ ಅದು ನವಶಕ್ತಿ ಯುವಕ ಮಂಡಲ, ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬಂದು ಸಮಾಜದಲ್ಲಿ ಸಕ್ರಿಯವಾಗಿ ಇದ್ದುಕೊಂಡು, ಗುರುತಿಸಿಕೊಂಡ ಒಂದು ಯುವಕ ಮಂಡಲ, ಈ ವರ್ಷ 25ನೇ ವರ್ಷದ ಆಚರಣೆಯಲ್ಲಿರುವ ಈ ಸಂಘ ಇನ್ನಷ್ಟು ಸಮಾಜಮುಖಿ ಕಾರ್ಯವನ್ನು ಮಾಡಲಿ ಎಂದು ಹಾಗೂ ಯುವ ಪೀಳಿಗೆ ಈ ದಿನ ಮಾತ್ರ ಕೆಸರಲ್ಲಿ ಆಟವಾಡಿ ಮುಗಿಸದೆ ತಮ್ಮ ಮನೆಯಲ್ಲಿರುವ ಒಂದು ಗದ್ದೆ ಯನ್ನಾದರೂ ಉಳುಮೆ ಮಾಡಿ ಭತ್ತ ಬೆಳೆಯುವಂತಾಗಲಿ, ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಮಡಾಮಕ್ಕಿ ಗ್ರಾಮ ಪಂಚಾಯಿತ ಮಾಜಿ ಅಧ್ಯಕ್ಷರಾದ ಉದಯ್ ಶೆಟ್ಟಿ ಭಾಗಳಮಕ್ಕಿ, ಬ್ರಹ್ಮ ಬೈದರ್ಕಳ ಗರೋಡಿ ಕೇರ್ಜಾಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಯಾನಂದ ಆರ್ ಶೆಟ್ಟಿ, ಕೆಸರು ಗದ್ದೆಯನ್ನು ನೀಡಿದಂತಹ ವಿಜಯ್ ಕುಮಾರ್ ಹೆಗ್ಡೆ ಶಾಂತನಮಕ್ಕಿ ಹಾಗೂ ಗುಲಾಬಿ ಶೆಟ್ಟಿ, ಶಾಂತನಮಕ್ಕಿ,ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿಯ ಮಾಜಿ ಅಧ್ಯಕ್ಷರಾದ ಪಟ್ಟಾಭಿರಾಮ ಭಟ್ ವೈ, ಲಿಯೋ ಕ್ಲಬ್ ನ ಕಾರ್ಯದರ್ಶಿಯಾದ ಪ್ರಜ್ಜಾ ಉಪಸ್ಥಿತರಿದ್ದರು. ಲಯನ್ಸ್ ಹಾಗೂ ಲಿಯೋ ಕ್ಲಬ್ ನ ಸದಸ್ಯರು,ಯುವಕ ಮಂಡಲದ ಸದಸ್ಯರು ಗ್ರಾಮಸ್ಥರು,ಸ್ಪರ್ಧಾಳುಗಳು ಹಾಜರಿದ್ದರು.

ಯುವಕ ಮಂಡಲ ಅಧ್ಯಕ್ಷ ಪ್ರಶಾಂತ್ ಹೆಗ್ಡೆ ಸ್ವಾಗತಿಸಿ
ಯುವಕ ಮಂಡಲದ ರಜತ್ ಸಂಭ್ರಮ ಸಮಿತಿ ಅಧ್ಯಕ್ಷರಾದ ಕೀರ್ತಿ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.