ಮಂಗಳೂರು : ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆ, ರೋರ‍್ಯಾಕ್ಟ್, ಮಂಗಳೂರು ಸಿಟಿ ಸಂಸ್ಥೆಯವರ ಸಂಯುಕ್ತ ಆಶ್ರಯದಲ್ಲಿ, ತಮ್ಮ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ “25ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವ” ಕ್ರೀಡಾ ಮತ್ತು ಸಾಂಸ್ಕçತಿಕ ಸ್ಪರ್ಧಾಕೂಟವನ್ನು ರವಿವಾರ ತಾ. 30.11.2025 ರಂದು ಕೆನರಾ ಹೈಸ್ಕೂಲ್ ಉರ್ವ ಮಂಗಳೂರು ಪ್ರಾಂಗಣದಲ್ಲಿ ಬೆಳಿಗ್ಗೆ 09.00 ಗಂಟೆಗೆ ಆಯೋಜಿಸಲಾಗಿದೆ. ಈ ಒಂದು ದಿನ ಅವಧಿಯ ಕ್ರೀಡಾ ಸ್ಪರ್ಧಾಕೂಟ ಮತ್ತು ಮನೋರಂಜನಾ ಉತ್ಸವದಲ್ಲಿ ಜಿಲ್ಲೆಯ ವಿವಿಧ 10 ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರಗಳಿAದ ಸುಮಾರು 434 ನಿವಾಸಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆ ಮತ್ತು ಕಲಾ ಕೌಶಲ್ಯವನ್ನು ಪ್ರದರ್ಶಿಸಲಿರುವರು.
ಈ ಕ್ರೀಡಾ ಮತ್ತು ಸಾಂಸ್ಕçತಿಕ ಸ್ಪರ್ಧಾಕೂಟವನ್ನು ಡಾ|| ಗುರುಕಿರಣ್, ಕನ್ನಡ ಚಲನಚಿತ್ರ ನಟ, ಗಾಯಕ, ಸಂಗೀತ ನಿರ್ದೇಶಕರವರು ಉದ್ಘಾಟಸಲಿರುವರು. ಸಹಾಯಕ ಗವರ್ನರ್, ವಲಯ 2, ರೋ. ಜಿಲ್ಲಾ 3181 ರೊ| ಚಿನ್ನಗರಿಗೌಡ ಮತ್ತು ವಲಯ ಸೇನಾನಿ ರೋಟರಿ ಜಿಲ್ಲಾ 3181 ವಲಯ 2, ರೋ| ರವಿ ಜಲನ್‌ರವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾದ ರೊ| ಭಾಸ್ಕರ್‌ರೈ ಕಟ್ಟಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.
ಸಾಂಸ್ಕçತಿಕ ಸ್ಪರ್ಧಾಕೂಟ ಮತ್ತು ಸಮಾರೋಪ ಸಮಾರಂಭವು ನಗರದ ಕೆನರಾ ಹೈಸ್ಕೂಲ್, ಉರ್ವ, ಮಂಗಳೂರು ಸಭಾಂಗಣದಲ್ಲಿ ಸಂಜೆ 04.00 ಗಂಟೆಗೆ ಜರಗಲಿದೆ. ರೋಟರಿ ಜಿಲ್ಲೆ 3181, ಚುನಾಯಿತ ಗವರ್ನರ್ ರೊ| ಸತೀಶ್ ಬೋಳಾರ್‌ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಸರ್ವಾಂಗೀಣ ಪ್ರದರ್ಶನ ನೀಡಿದ ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರಕ್ಕೆ ಪ್ರಶಸ್ತಿ ಫಲಕವನ್ನು ಪ್ರಧಾನ ಮಾಡಲಿರುವರು.
ಮಕ್ಕಳು ಕ್ರೀಡಾ ಮತ್ತು ಮನೋರಂಜನಾ ಉತ್ಸವದಲ್ಲಿ ತಮ್ಮ ಆಕರ್ಷಕ ಪಥ ಸಂಚಲನ ಮತ್ತು ಪ್ರತಿಭಾ, ಕೌಶಲ್ಯ, ಅನಾವರಣ ಮತ್ತು ಸಾಧನೆಯನ್ನು ಪ್ರದರ್ಶಿಸಲಿರುವರು. ಅವರ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿ ಅವರ ಒಂದು ದಿನದ ಉತ್ಸಾಹ ಮತ್ತು ಸಂತಸವನ್ನು ಹೊರಹೊಮ್ಮಿಸುವುದೇ ರೋಟರಿ ಸಂಸ್ಥೆಯ ಪ್ರಮುಖ ಉದ್ಧೇಶವಾಗಿದೆ. ಈ ಕ್ರೀಡಾಕೂಟವನ್ನು ರೋಟರಿ ಸಂಸ್ಥೆಯು 1996ರಿಂದ ಸತತವಾಗಿ ಆಯೋಜಿಸುತ್ತಿದೆ.

