ಉಡುಪಿ: ಪ್ರಧಾನಿ ನರೇಂದ್ರ ಮೋದಿ ಸೇನಾ ಹೆಲಿಕಾಪ್ಟರ್ ನಲ್ಲಿ ಉಡುಪಿಗೆ ಆಗಮಿಸಿದ್ದು ಇದೀಗ ಉಡುಪಿಯ ಕರಾವಳಿ ಬೈಪಾಸ್ ನಿಂದ ಬನ್ನಂಜೆ ಮಾರ್ಗವಾಗಿ ಕಲ್ಸಂಕದವರೆಗೆ ನಡೆಯುತ್ತಿರುವ ರೋಡ್ ಶೋ ನಲ್ಲಿ ಭಾಗವಹಿಸಿದರು.
ಜನರ ನಿಯಂತ್ರಣಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ರೋಡ್ ಶೋ ನಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಪುಷ್ಪಾರ್ಚನೆ ಮಾಡುತ್ತ ಜನರು ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಿದರು.

