ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪೋಷಕರ ಸಭೆಯೂ ಯಶಸ್ವಿಯಾಗಿ ನಡೆಯಿತು. ಈ ಸಭೆಯಲ್ಲಿ , ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ, ಉಬರ್ ಡೊನರ್ಸ್ ಇದರ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶ್ರೀ ಶಬೀರ್ ಕೆಂಪಿ ಅವರಿಗೆ ಸನ್ಮಾನಿಸಲಾಯಿತು. ಪುತ್ತೂರು ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತರಾದ ಶ್ರೀ ಯು. ಎಲ್. ಉದಯ ಕುಮಾರ್ ಅವರನ್ನು ಸಹ ಗೌರವಿಸಲಾಯಿತು. ಜ್ಞಾನ ಭಾರತಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್‌ಇದರ ಶ್ರೀ ಅಬ್ದುಲ್ಲ ರಾವೂಫ್ ಯು ಟಿ. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಇಕ್ಬಾಲ್ ಜೋಗಿಬೆಟ್ಟು ಮತ್ತು ಉಪಾಧ್ಯಕ್ಷರಾದ ಶುಕೂರು ಮೆದ್ರಾಬೆಟ್ಟು, ಕೋಶಾಧಿಕಾರಿ ಶ್ರೀ ಮಜೀದ್ ಮಠ ಕಾರ್ಯಕ್ರಮದಲ್ಲಿ ಭಾಗವಹಿಸಿದವರು:
ಪ್ರಿನ್ಸಿಪಾಲರಾದ ಇಬ್ರಾಹಿಂ ಖಲೀಲ್ ಹೆಂತಾರ್ ಮತ್ತು ಇಲ್ಯಾಸ್ ಕರಾಯ, ಸಿದ್ದಿಕ್ ಹ್ಯಾಪಿ ಟೈಮ್ಸ್ ಉಪಸ್ಥಿತತರಿದ್ದರು.
ಈ ಕಾರ್ಯಕ್ರಮವು ಶಾಲೆಯ ಪ್ರಗತಿಯ ಕುರಿತು ಚರ್ಚಿಸಲು ಮತ್ತು ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರನ್ನು ಗೌರವಿಸಲು ಉತ್ತಮ ವೇದಿಕೆಯಾಯಿತು.

