ಉಡುಪಿ : ನಗರದಲ್ಲಿ ಎಐ ಸಂಚಾರ ವ್ಯವಸ್ಥೆ ಜಾರಿ: ಎಸ್ಪಿ

0
492

ಉಡುಪಿ ನಗರದಲ್ಲಿ ಆರ್ಟಿಫಿಶಲ್​ ಇಂಟೆಲಿಜೆನ್ಸ್​ ಟ್ರಾಫಿಕ್​ ಸಿಸ್ಟಮ್​ ಮೂಲಕ ದಂಡ ವಿಧಿಸುವ ಹಾಗೂ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಹರಿರಾಂ ಶಂಕರ್​ ತಿಳಿಸಿದ್ದಾರೆ. ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ನಗರದಲ್ಲಿ ಸಂಚಾರಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಸಂಬಂಧ ಮೂರು ಪ್ರಾಜೆಕ್ಟ್​ಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಎಐ ಟ್ರಾಫಿಕ್​ ಮ್ಯಾನೆಜ್​ಮೆಂಟ್​ ಸಿಸ್ಟಮ್​ ಯೋಜನೆಯಲ್ಲಿ ಏಳು ಜಂಕ್ಷನ್​ಗಳಲ್ಲಿ 14 ಕ್ಯಾಮೆರಾಗಳನ್ನು ಆಳವಡಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ನಗರಸಭೆಯ 50 ಲಕ್ಷ ರೂ. ಅನುದಾನದಲ್ಲಿ 4 ಜಂಕ್ಷನ್​ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡದ ನೋಟಿಸ್​ ನೇರವಾಗಿ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಆರಂಭಿಸಲಾಗುವುದು. ಟ್ರಾಫಿಕ್​ ಪೊಲೀಸರು ನಿಂತು ದಂಡ ವಿಧಿಸುವ ಕ್ರಮ ನಿಧಾನಕ್ಕೆ ಕಡಿಮೆ ಮಾಡಲಾಗುವುದು ಎಂದು ಅವರು ಹೇಳಿದರು.

ಸ್ಪೀಡ್​ ರ್ಯಾಡರ್​ ಗನ್​ ಅಳವಡಿಕೆ ,ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 6 ಸ್ಥಳಗಳಲ್ಲಿ ಸ್ಪೀಡ್​ ರ್ಯಾಡರ್​ ಗನ್​ ಅಳವಡಿಸಲು ಅನುಮೋದನೆ ದೊರೆತಿದೆ. ಈ ಮೂಲಕ ಓವರ್​ ಸ್ಪೀಡ್​ನಲ್ಲಿ ಸಂಚರಿಸುವ ವಾಹನಗಳನ್ನು ಪತ್ತೆ ಹಚ್ಚಲಾಗುವುದು. ಉಡುಪಿ ಚೇಂಬರ್​ ಆಫ್​ ಕಾಮರ್ಸ್​ ಸಹಭಾಗಿತ್ವದಲ್ಲಿ ಸೇನಾದೃಷ್ಟಿ ಯೋಜನೆಯಲ್ಲಿ 200 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಿಸಲಾಗಿದ್ದು, ಈಗಾಗಲೇ 25 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

LEAVE A REPLY

Please enter your comment!
Please enter your name here