ತೋಕೂರು-ಕುಳಾಯಿ ಸಮುದಾಯ ಭವನ ಅಭಿವೃದ್ಧಿ : ಭಾಸ್ಕರ್ ಶೆಟ್ಟಿ ಪಡುಮನೆ ಚಿಕ್ಕ ಪರಾರಿ ಅಧ್ಯಕ್ಷರಾಗಿ ನೇಮಕ

0
30

ಮಂಗಳೂರು : ತೋಕೂರು-ಕುಳಾಯಿಯ ಸಮುದಾಯ ಭವನದ ನಿರ್ವಹಣಾ ಸಮಿತಿಯ ಸಭೆಯು ಜುಲೈ 26ರಂದು ಸಂಜೆ 3 ಗಂಟೆಗೆ ಸಮುದಾಯ ಭವನದಲ್ಲಿ ಸಮಿತಿ ಅಧ್ಯಕ್ಷ ಅರುಣ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಮುದಾಯ ಭವನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯ ಆರಂಭದಲ್ಲಿ ಅಧ್ಯಕ್ಷ ಅರುಣ್ ಚೌಟ ಅವರು ಹಿಂದಿನ ಅವಧಿಯ ಜಮಾ-ಖರ್ಚಿನ ವಿವರವನ್ನು ಸದಸ್ಯರ ಮುಂದಿರಿಸಿ, ನೂತನ ಸಮಿತಿ ರಚಿಸುವ ಕುರಿತು ಅಭಿಪ್ರಾಯ ಕೋರಿದರು. ಬಳಿಕ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರ ಸರ್ವಾನುಮತದೊಂದಿಗೆ ಸಮಿತಿಯನ್ನು ಪುನರ್‌ರಚಿಸಲು ತೀರ್ಮಾನಿಸಲಾಯಿತು.

ಈ ವೇಳೆ ನೂತನ ಸಮಿತಿಗೆ “ನಿರ್ವಸಿತರ ಸಮುದಾಯ ಭವನದ ಅಭಿವೃದ್ಧಿ ಸಮಿತಿ, ತೋಕೂರು-ಕುಳಾಯಿ” ಎಂದು ಹೆಸರು ನಿಗದಿಪಡಿಸಲಾಯಿತು. ಹಿರಿಯರಾದ ಜಯಂತ್ ಟಿ. ಸಾಲ್ಯಾನ್ ಅವರು ಹಿಂದಿನ ಸಮಿತಿಯ ಕಾರ್ಯಚಟುವಟಿಕೆಗಳನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಇನ್ನು ಮುಂದೆ ಸಮಿತಿಯ ಅವಧಿಯನ್ನು ಎರಡು ವರ್ಷಗಳಿಗೊಮ್ಮೆ ಮರುರಚಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯ ಅಂತ್ಯದಲ್ಲಿ ಟಿ. ಮೋಹನ್ ಕೊಟ್ಟಾರಿ ಅವರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ವಂದನಾರ್ಪಣೆ ಮಾಡಿದರು.

ನೂತನ ಪದಾಧಿಕಾರಿಗಳು

ಗೌರವಾಧ್ಯಕ್ಷರು: ಜಯಂತ್ ಟಿ. ಸಾಲ್ಯಾನ್
ಅಧ್ಯಕ್ಷರು: ಭಾಸ್ಕರ್ ಶೆಟ್ಟಿ ಪಡುಮನೆ
ಉಪಾಧ್ಯಕ್ಷರು: ಜಯರಾಮ್ ಶೆಟ್ಟಿ ಕೋಡಿಕೆರೆ (ಮಯ್ಯದಿ, ತೋಕೂರು)
ಕಾರ್ಯದರ್ಶಿ: ನಿತೇಶ್ ಸನಿಲ್ ತೋಕೂರು
ಜೊತೆ ಕಾರ್ಯದರ್ಶಿಗಳು: ದಾಮೋದರ್ ಶೆಟ್ಟಿ ತೋಕೂರು, ಸುರೇಶ್ ಶೆಟ್ಟಿ ತೋಕೂರು
ಕೋಶಾಧಿಕಾರಿ: ಟಿ. ಮೋಹನ್ ಕೊಟ್ಟಾರಿ

ಗೌರವ ಸಲಹೆಗಾರರು ಸೀತಾರಾಮ ಶೆಟ್ಟಿ, ಮೋಹನ್ ಐ. ಮೂಲ್ಯ, ವಿಜಯ್ ಕುಮಾರ್ ಅಮೀನ್, ಅರುಣ್ ಚೌಟ, ಮಾಧವ ಸುವರ್ಣ, ವಿಶ್ವನಾಥ ಕೊಟ್ಟಾರಿ ಹಾಗೂ ರಮೇಶ್ ಸುವರ್ಣ.

ಕಾರ್ಯಕಾರಿಣಿ ಸದಸ್ಯರು

ರೋಹಿತ್ ತೋಕೂರು, ನಿತಿನ್ ಎ. ಬಂಗೇರ (ಕೋಡಿಕೆರೆ), ಪ್ರಮೋದ್ ಶೆಟ್ಟಿ, ಪುಷ್ಪರಾಜ್ ಕೋಡಿಕೆರೆ, ಕೇಶವ ದೇವಾಡಿಗ ಕೋಡಿಕೆರೆ, ಗಂಗಾಧರ್ ಶೆಟ್ಟಿ ತೋಕೂರು, ದಿನೇಶ್ ತೋಕೂರು, ಜಯಂತ್ ದಾಸ್ ತೋಕೂರು, ಸುರೇಶ್ ತೋಕೂರು, ಗುರು ಪ್ರಸಾದ್ ತೋಕೂರು, ಸಂತೋಷ್ ತೋಕೂರು, ನಿತಿನ್ ಕೊಟ್ಟಾರಿ (ರಾಂಪಾಲ್) ಹಾಗೂ ಮಾಧವ ರಾಂಪಾಲ್.

ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಹೊಸ ಸಮಿತಿಯ ನೇತೃತ್ವದಲ್ಲಿ ಸಮುದಾಯ ಭವನದ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗ ಪಡೆದು, ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿ ಎಂಬ ಆಶಯವನ್ನು ಸದಸ್ಯರು ವ್ಯಕ್ತಪಡಿಸಿದರು.