ಡಿ. 6ರಂದು ವಿಕಾಸ ಬೆಂಗಳೂರು ಹಾಗೂ ಸುಗುಣ ಮಾಲಾ ಉಡುಪಿ ಪ್ರಸ್ತುತ ಪಡಿಸುವ ಕರಾವಳಿ ವಿಕಾಸ ಸಂಭ್ರಮ – 2025

0
137

ವರದಿ :ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

ತುಳುನಾಡು ÷ವಿಕಾಸ, ಮಾಧ್ಯಮ ಮಿತ್ರರ ವೇದಿಕೆ (ರಿ) ಬೆಂಗಳೂರು.ಹಾಗೂ ‘ಸುಗುಣ ಮಾಲಾ’ ಆಧ್ಯಾತ್ಮಿಕ ಮಾಸ ಪತ್ರಿಕೆ, ಪುತ್ತಿಗೆ ಮಠ, ಉಡುಪಿ. ವತಿಯಿಂದ ದಿನಾಂಕ:06-12-2025 – ಶನಿವಾರ
ಸಮಯ: ಬೆಳಗ್ಗೆ 9:30 ರಿಂದ ಸಂಜೆ 5 ವರೆಗೆ ಪುತ್ತಿಗೆ ನರಸಿಂಹ ಸಭಾಭವನ, ಐದನೇ ಮಹಡಿ ಗೀತಾ ಮಂದಿರ, ಕೃಷ್ಣ ಮಠ, ಉಡುಪಿ. ಇಲ್ಲಿ “ಕರಾವಳಿ ವಿಕಾಸ ಸಂಭ್ರಮ-2025” ಆಯೋಜಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಉದ್ಘಾಟನೆ ಶ್ರೀಮನ್ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ, ಉಪೇಂದ್ರತೀರ್ಥ ಪರಂಪರೆಯ ಶ್ರೀ ಶ್ರೀ 1008 ಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಪುತ್ತಿಗೆ ಮಠ ಹಾಗೂ ಶ್ರೀ ಶ್ರೀ 1008 ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ (ಕಿರಿಯ ಪಟ್ಟ) ಇವರು ನೆರವೇರಿಸಲಿದ್ದಾರೆ ಎಂದು ವಿಕಾಸ ಪದಾಧಿಕಾರಿಗಳು, ‘ಸುಗುಣ ಮಾಲಾ’ ಪತ್ರಿಕಾ ಬಳಗ, ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಂ. ಪ್ರಸನ್ನಾಚಾರ್ಯ ಎಸ್ ಕಟ್ಟಿ, ವೈದಿಕ ವಿಜ್ಞಾನ ಜ್ಯೋತಿಷಿಗಳು ವಹಿಸಿಕೊಳ್ಳಲಿದ್ದು.
ಮುಖ್ಯ ಅತಿಥಿಗಳಾಗಿ ಕಿರಣ ಕೂಡ್ಗಿ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ . ವೇದವ್ಯಾಸ ಕಾಮತ್ ಶಾಸಕರು, ಮಂಗಳೂರು ನಗರ ವಿಧಾನ ಸಭಾ ಕ್ಷೇತ್ರ., ಯಶಪಾಲ್‌ ಸುವರ್ಣ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ . ರಘುಪತಿ ಭಟ್ ಮಾಜಿ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ. ಕ್ಯಾಪ್ಟನ್, ಗಣೇಶ್ ಕಾರ್ಣಿಕ್ ಮಾಜಿ ಸದಸ್ಯರು, ಕರ್ನಾಟಕ ವಿಧಾನ ಪರಿಷತ್. ರಾಘವೇಂದ್ರ ಭಟ್ ಮಾಜಿ ನಿರ್ದೇಶಕರು, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ.
ರಘುನಾಥ ಸೋಮಯಾಜಿ, ಉದ್ಯಮಿಗಳು ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿ:- ಪ್ರಕಾಶ್ ಇಳಂತಿಲ
ಸಂಪಾದಕರು, ಹೊಸ ದಿಗಂತ, ಮಂಗಳೂರು.
ಜಿತೇಂದ್ರ ಕುಂದೇಶ್ವರ ಬ್ಯೂರೋ ಮುಖ್ಯಸ್ಥರು, ವಿಶ್ವವಾಣಿ, ಮಂಗಳೂರು, ಇವರು ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿ:- ಪ್ರಕಾಶ್ ಇಳಂತಿಲ
ಸಂಪಾದಕರು, ಹೊಸ ದಿಗಂತ, ಮಂಗಳೂರು.
ಜಿತೇಂದ್ರ ಕುಂದೇಶ್ವರ ಬ್ಯೂರೋ ಮುಖ್ಯಸ್ಥರು, ವಿಶ್ವವಾಣಿ, ಮಂಗಳೂರು, ಇವರು ಭಾಗವಹಿಸಲಿದ್ದಾರೆ.

ಕರಾವಳಿ ವಿಕಾಸ ಸಂಭ್ರಮ–2025 ಉಪನ್ಯಾಸ ಕಾರ್ಯಕ್ರಮವಿದ್ದು
ಆಧ್ಯಾತ್ಮಿಕ ಮಾಸ ಪತ್ರಿಕೆ ‘ಸುಗುಣ ಮಾಲಾ’ ನಡೆದು ಬಂದ ದಾರಿ. ಉಪನ್ಯಾಸಕರು ಓಂಪ್ರಕಾಶ್ ಭಟ್, ಸದಸ್ಯರು, ಸುಗುಣ ಮಾಲಾ ಸಂಪಾದಕೀಯ ಸಲಹಾ ಮಂಡಳಿ, ಉಡುಪಿ.
ಗೌರವ ಉಪಸ್ಥಿತಿ ಮಹಿತೋಷ ಆಚಾರ್ಯ, ಸಂಪಾದಕರು, ಸುಗುಣ ಮಾಲಾ, ಆಧ್ಯಾತ್ಮಿಕ ಮಾಸ ಪತ್ರಿಕೆ, ಪುತ್ತಿಗೆ ಮಠ. ಇರಲಿದೆ

ವಿಕಾಸ ಉಡುಪಿ ಶ್ರೀಕೃಷ್ಣ ಸದ್ಭಾವನಾ ಪ್ರಶಸ್ತಿ 2025

ವಿದಾಷಿ, ಗಾಯತ್ರಿ ಚಂದ್ರಶೇಖರ,
ಹಿರಿಯ ಭರತನಾಟ್ಯ ಕಲಾವಿದೆ ಹಾಗೂ ನಿರ್ದೇಶಕರು, ನೃತ್ಯ ಸ್ಕೂಲ್ ಆಫ್ ಆರ್ಟ್, ಬೆಂಗಳೂರು.
ಪ್ರೊ. ಬಿ ಎಸ್ ಶಿವಕುಮಾರ
ಡೀನ್, ತೌಲನಿಕ ದ್ರಾವಿಡ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ , ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರಪ್ರದೇಶ. (ಪುತ್ತೂರು ಮೂಲ)
ಅಗರಿ ರಾಘವೇಂದ್ರ ರಾವ್, ಉದ್ಯಮಿ, ಸುರತ್ಕಲ್.

ವೈದ್ಯ ಲೋಕ ಮತ್ತು ಹೆಲ್ತ್ ವಿಷನ್ ವೈದ್ಯಕೀಯ ಮಾಸ ಪತ್ರಿಕೆ ಪ್ರಾಯಾಜಿತ ವಿಕಾಸ ವೈದ್ಯ ರತ್ನ ಪ್ರಶಸ್ತಿ-2025.
ಪುರಸ್ಕೃತರು: ಡಾ. ಆನಂದ ಶೆಡ್ಡಾಳ,ಆರ್ಯುವೇದ ಮತ್ತು ಅಲೋಪತಿ ವೈದ್ಯರು, ಹೊಸ ಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಸಂಪದ ಸಾಲು ಪತ್ರಿಕೆ ಪ್ರಾಯೋಜಿತ ವಿಕಾಸ ಸಂಗೀತ ರತ್ನ ಪ್ರಶಸ್ತಿ-2025.
ಪುರಸ್ಕೃತರು: ವಿದುಷಿ. ಪವನ ಬಿ ಆಚಾರ್, ಹಿರಿಯ ವೀಣಾ ವಾದಕರು, ಉಡುಪಿ.

ಪುಸ್ತಕಗಳ ಬಿಡುಗಡೆ
ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್.
ಪುಸ್ತಕ: ಹಸಿಗನಸು ಕಾದಂಬರಿ,
ಲೇಖಕಿ: ಶ್ರೀಮತಿ, ಇಂದಿರಾ ನಾಡಿಗ್, ಬೆಂಗಳೂರು.
ಭುವನಾಭಿರಾಮ ಉಡುಪ, ಪ್ರಧಾನ ಸಂಪಾದಕರು, ಯುಗಪುರುಷ ಪತ್ರಿಕೆ.
ಪುಸ್ತಕ: ಗೋಪಾಳದಿಂದ ನೇಪಾಳದೆಡೆಗೆ, ಪ್ರವಾಸ ಕಥನ ಲೇಖಕರು: ಆದಿತ್ಯ ಪ್ರಸಾದ್, ಶಿವಮೊಗ್ಗ.

ಶ್ರೀಮತಿ, ಗೀತಾ ಕುಲಕರ್ಣಿ, ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್, ಮಂಗಳೂರು ನಗರ.
ಪುಸ್ತಕ: ‘ದಿ ಅಸ್ತ್ರ ಕೋಡೆಕ್ಸ್
ಹಿಂದೂ ಧರ್ಮದ ಆಚರಣೆಗಳಿಗೆ ವೈಜ್ಞಾನಿಕ ತಳಹದಿ ಸೂಚಿಸುವ ಸಂಶೋಧನಾ ಪುಸ್ತಕ. ಲೇಖಕರು: ಉಮೇಶ ದತ್, ಆಸ್ಟ್ರೇಲಿಯಾ.
ನಂತರ ವಿಚಾರಗೋಷ್ಠಿ
ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಕರಾವಳಿಯ ಹಲವು ಪತ್ರಕರ್ತ ಮಾಧ್ಯಮ ಮಿತ್ರರಿಗೆ ಮತ್ತು ಹಿರಿಯರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here