ವರದಿ ರಾಯಿ ರಾಜ ಕುಮಾರ
ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಸೇನೆಯ ಸಂಸ್ಥಾಪಕ ವರ್ತೂರು ಮಂಜುನಾಥ್ ಅವರ ನೇತೃತ್ವದಲ್ಲಿ ಮೂಡುಬಿದಿರೆ ತಾಲೂಕು ಸರಕಾರಿ ಕಚೇರಿ ಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಪೀಠಿಕೆಯ ಫೋಟೋ ಪ್ರತಿಗಳನ್ನು ವಿತರಿಸಲಾಯಿತು. ಸಮಿತಿಯು ತಾಲೂಕು ಕಚೇರಿ, ತಹಸಿಲ್ದಾರರು, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ, ಇತ್ಯಾದಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರವೀಣ್ ಕುಮಾರ್, ಮಹಿಳಾ ಘಟಕದ ಸಹಕಾರ್ಯದರ್ಶಿ ಲೀಲಾ, ಪದ್ಮ, ಗೋಪಾಲ, ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.
.

