ಬಲ್ಮಠ ರಸ್ತೆ – ಹಂಪನಕಟ್ಟೆ ರಸ್ತೆ ವಿಭಾಜಕದ ಅವ್ಯವಸ್ಥೆ: ಅವೇಕ್ ಕುಡ್ಲ ವತಿಯಿಂದ ಸಣ್ಣ ಹೆಜ್ಜೆ

0
132

ಮಂಗಳೂರಿನ ಹೃದಯ ಭಾಗದಲ್ಲಿರುವ ಬಲ್ಮಠ ರಸ್ತೆ, ಹಂಪನಕಟ್ಟೆ ಪ್ರದೇಶದಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಇಲ್ಲಿ ಬಹಳ ಸಮಯದಿಂದ ರಸ್ತೆ ವಿಭಾಜಕದ ಅವ್ಯವಸ್ಥೆ, ಸರಿಯಾದ ಮಾರ್ಕಿಂಗ್‌ಗಳ ಮತ್ತು ಸೂಚನಾ ಫಲಕಗಳ ಕೊರತೆಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿದ್ದವು. ಈ ಸಮಸ್ಯೆ ಇತ್ತೀಚಿಗೆ ನಮ್ಮ ಗಮನಕ್ಕೆ ಬಂತು. ಸಮಸ್ಯೆಯನ್ನು ನಗರ ಪಾಲಿಕೆ/ಸಂಬಂಧಪಟ್ಟ ಇಲಾಖೆಯ ಮೂಲಕ ಸರಿಪಡಿಸಲು ಇನ್ನೂ ಹೆಚ್ಚಿನ ದಿನಗಳು ಹೋಗುವ ಸಾಧ್ಯತೆ ಇರುವುದರಿಂದ, ಮತ್ತಷ್ಟು ಅಪಘಾತಗಳಾಗಬಾರದೆಂಬ ಉದ್ದೇಶದಿಂದ ನಾವು ತಾತ್ಕಾಲಿಕ ಪರಿಹಾರ ನೀಡಲು ಮುಂ-ದಾದೆವು. ನಮ್ಮ ಸೇವಾ ಟ್ರಸ್ಟ್ ಪರಿಚಯಿಸಿದ “ಅವೇಕ್ ಕುಡ್ಲ” ಪರಿಕಲ್ಪನೆಯಡಿಯಲ್ಲಿ “ಗೋರಕ್ಷನಾಥ ಹುಲಿ (ರಿ), ಜೆಪ್ಪು” ಸಂಸ್ಥೆ ನಮ್ಮೊಂದಿಗೆ ಸೇವೆಗೆ ಕೈಜೋಡಿಸಿತು.

ಮೊದಲಿಗೆ ಅಪಘಾತದಿಂದ ಜಜ್ಜಿ ಹೋಗಿದ್ದ ಡಿವೈಡರ್‌ಗೆ ಸಿಮೆಂಟ್ ಮಿಶ್ರಣ ಮಾಡಿ ಸಮತಟ್ಟು ಮಾಡಲಾಯಿತು. ನಂತರ ವಿಭಾಜಕಕ್ಕೆ ಕಪ್ಪು ಹಳದಿ ಬಣ್ಣ ಹಚ್ಚಿ ಸ್ಪಷ್ಟವಾಗಿ ಕಾಣುವಂತೆ ಮಾಡಲಾಯಿತು. ದೂರದಿಂದ ಬರುವ ವಾಹನ ಚಾಲಕರಿಗೆ ಎಚ್ಚರಿಕೆ ನೀಡಲು ಪ್ರತಿಫಲಿಸುವ ಸೂಚನಾ ಫಲಕ (Signboard) ಅಳವಡಿಸಲಾಯಿತು. ಸುಮಾರು 5 ದಿನಗಳ ಕಾಲ ನಡೆದ ಈ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡಿದ “ಗೋರಕ್ಷನಾಥ ಹುಲಿ (ರಿ), ಜೆಪ್ಪು” ಹಾಗೂ ಸೂಚನಾ ಫಲಕ ಕೊಡುಗೆ ನೀಡಿದ “Dinnu Arts, Jeppu” ಇವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

‘ಅವೇಕ್ ಕುಡ್ಲ’ ಪರಿಕಲ್ಪನೆಯ ಪ್ರಕಾರ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಸಂಸ್ಥೆಗಳೇ ವ್ಯವಸ್ಥೆಯೊಂದಿಗೆ ಸೇರಿ “ಸಮಸ್ಯೆಯನ್ನು ವೈಭವೀಕರಿಸದೆ ಪರಿಹಾರದ ಕಡೆ ಗಮನಕೊಡುವುದು” ಅತ್ಯಂತ ಮುಖ್ಯ. ಈ ಪರಿಕಲ್ಪ-ನೆಯನ್ನು ಮಂಗಳೂರಿನ ಇತರೆ ಸಂಘ -ಸಂಸ್ಥೆಗಳು ಕೂಡ ಅಳವಡಿಸಿಕೊಳ್ಳಬೇಕೆಂದು ನಾವು ಮನವಿ ಮಾಡುತ್ತೇವೆ.

ನಮ್ಮ ಗಮನಕ್ಕೆ ಬಂದ ಈ ಸಮಸ್ಯೆಯಿಂದ, ಯಾರಿಗಾದರೂ ತೊಂದರೆ ಅಥವಾ ಅನಾಹುತ ಆಗುವ ಸಾಧ್ಯತೆ ಇದ್ದುದರಿಂದ ‘ನಮ್ಮಿಂದ ಏನೂ ಮಾಡಲಾಗಲಿಲ್ಲವಲ್ಲ’ ಎಂಬ ಪಶ್ಚಾತ್ತಾಪ ಬರುವುದನ್ನು ತಪ್ಪಿಸಲು ತಕ್ಷಣಕ್ಕೆ ತಾತ್ಕಾಲಿಕ ಪರಿಹಾರ (Temporary Solution) ಒದಗಿಸಲಾಗಿದೆ. ಇದೇ ಸಂದರ್ಭ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ (Permanent Solution) ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದ್ದು, ಮುಂದಿನ ಸುಧಾರಣೆಗಾಗಿ ನಮ್ಮ ಟ್ರಸ್ಟ್‌ನಿಂದ ಅಧಿಕೃತ ಮನವಿಯನ್ನೂ ಸಲ್ಲಿಸಲಾಗಿದೆ.

ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು.

ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.)
ಸಂಪರ್ಕ: 8296321239

LEAVE A REPLY

Please enter your comment!
Please enter your name here