ಬೆಳ್ತಂಗಡಿ:ಪ್ರಸನ್ನ ಕಾಲೇಜು ಹಾಗೂ ಅಭ್ಯಾಸ್ ಪಿಯುಸಿ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಬ್ಬಕ್ಕರಾಣಿಯ ಕುರಿತು ಉಪನ್ಯಾಸ ಹಾಗೂ ಸಾಕ್ಷ ಚಿತ್ರ ಪ್ರದರ್ಶನ ಕಾರ್ಯಕ್ರಮ

0
78

ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪ ನ್ಯಾಸಕರ ಸಂಘ ಮಂಗಳೂರು ಇದರ ವತಿಯಿಂದ ದಿನಾಂಕ 15-12-2025 ನೇ ಸೋಮವಾರ ಪ್ರಸನ್ನ ಎಜುಕೇಶನ್ ಟ್ರಸ್ಟ್ ಬೆಳ್ತಂಗಡಿ ಹಾಗೂ ಅಭ್ಯಾಸ್ ಪಿಯುಸಿ ಕಾಲೇಜ್ ಕಾಶೀಬೆಟ್ಟು ಬೆಳ್ತ೦ಗಡಿ ಇದರ ಜಂಟಿ ಆಶ್ರಯದಲ್ಲಿ ಅಭ್ಯಾಸ್ ಕಾಲೇಜಿನ ಸಭಾಂಗಣದಲ್ಲಿ ಸಂಜೆ ಗಂಟೆ 4 ರಿಂದ ಅಬ್ಬಕ್ಕ ರಾಣಿ ಆಳ್ವಿಕೆಯ 500ನೇ ವರ್ಷಾಚರ ಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾ ಟನೆಯನ್ನು ಅಭ್ಯಾಸ್ ಪಿಯುಸಿ ಕಾಲೇಜಿನ ಚೇರ್ಮನ್ ಶ್ರೀ ರ್ಕಾರ್ತಿಕೇಯ ಎಂ.ಎಸ್ ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸನ್ನ ಎಜುಕೇಶನ್ ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲರಾದ ಶ್ರೀ ಗುರುಪ್ರಸಾದ್ ವಹಿಸಲಿದ್ದಾರೆ.

ಅಬ್ಬಕ್ಕ ರಾಣಿಯ ಕುರಿತ ವಿಶೇಷ ಉಪನ್ಯಾಸವನ್ನು ಉಪನ್ಯಾಸಕರೂ,ಸಾಹಿತಿಗ ಳೂ,ಸಂಶೋಧಕರೂ ಹಾಗೂ ಚಲನಚಿತ್ರ ನಿರ್ದೇಶಕರೂ ಆದ ಬಿ.ಎ.ಲೋಕಯ್ಯ ಶಿಶಿಲ ಅವ ರು ನಡೆಸಿಕೊಡಲಿದ್ದಾರೆ. ಆ ಬಳಿಕ ಸಾಕ್ಷ ಚಿತ್ರ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here