ಬೀದ‌ರ್ : ಶಾಲಾ ವಾಹನ ಹರಿದು ವಿದ್ಯಾರ್ಥಿನಿ ಸಾವು

0
110

ಶಾಲಾ ವಾಹನ ಹರಿದು 8 ವರ್ಷದ ಬಾಲಕಿ ಸಾವನ್ನಪ್ಪಿದ ದುರಂತ ಘಟನೆ ಬೀದರ್‌ನ ಜನವಾಡಾ ಗ್ರಾಮದ ಪೊಲೀಸ್ ಕ್ವಾರ್ಟಸ್ ಬಳಿ ಸಂಭವಿಸಿದೆ.

ಬೀದ‌ರ್ ತಾಲೂಕಿನ ಜನವಾಡ ಗ್ರಾಮದ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ಮೃತ ದುರ್ದೈವಿ. ಗುರುನಾನಕ್ ಶಾಲೆಯ ಬಸ್‌ನಿಂದ ಬಸ್ ಚಾಲಕ ಮೃತ ಬಾಲಕಿ ಸೇರಿ ಮೂವರನ್ನು ಕೆಳಗಿಳಿಸಿದ್ದನು. ಬಾಲಕಿ ಬಸ್‌ನಿಂದ ಇಳಿದು ಬಸ್ ಪಕ್ಕವೇ ನಿಂತಿದ್ದನ್ನು ಗಮನಿಸದ ಚಾಲಕ ಬಾಲಕಿಯ ಮೇಲೆಯೇ ಬಸ್ಸು ಚಲಾಯಿಸಿದ್ದಾನೆ. ಬಸ್ಸಿನ ಹಿಂಬದಿ ಚಕ್ರಕ್ಕೆ ಬಾಲಕಿ ಸಿಲುಕಿಕೊಂಡಿದ್ದಳು. ತಕ್ಷಣ ಬಾಲಕಿಯನ್ನು ಗಡಿಕುಶನೂರು ಗ್ರಾಮದ ರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಪ್ರಾಣಬಿಟ್ಟಿದ್ದಾಳೆ.

LEAVE A REPLY

Please enter your comment!
Please enter your name here