ನ್ಯಾಯ ನೀಡುವ ಪೊಲೀಸ್ ಕೈಗಳಲ್ಲಿಯೇ ಅನ್ಯಾಯ !

0
166

ಕುಮಾರಿ ಅಕ್ಷತಾ ಪೂಜಾರಿಯವರ ಮನೆಗೆ ದಿನಾಂಕ 10/12/2025 ರಂದು ಮುಂಜಾನೆ ಸುಮಾರು 4:00 ಗಂಟೆಗೆ, ಪೊಲೀಸರು ಕೋರ್ಟ್ ಅಮೀನ್ ಇಲ್ಲದೆ, ಮತ್ತು ಮನೆಗೆ ಅಕ್ರಮ ಪ್ರವೇಶ ಮಾಡಿ , ತಮ್ಮ ಅಧಿಕಾರದ ಪರಮ ದುರುಪಯೋಗವನ್ನು ಪ್ರದರ್ಶಿಸಿ ಆ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ಎಸಗಿರುವುದು ತೀವ್ರ ಖಂಡನೀಯವಾಗಿದೆ.

ಇನ್ನೂ ಬೇಸರಕಾರಿ ವಿಷಯವೆಂದರೆ, ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳುವ ಉದ್ದೇಶದಿಂದ ದೌರ್ಜನ್ಯಕ್ಕೆ ಒಳಗಾದ ಆ ಬಡ ವಿದ್ಯಾರ್ಥಿನಿಯ ಮತ್ತು ತಾಯಿಯ ಮೇಲೆ, ಕರ್ತವ್ಯ ಅಡ್ಡಿ ಪಡಿಸಿದೆ ಎಂದು ಸುಳ್ಳು FIR ದಾಖಲಿಸಿರುವುದು. ಇದು ನ್ಯಾಯ ವ್ಯವಸ್ಥೆಗೆ ಮಸಿ ಬಳಿದಂತಾಗಿದೆ.

ಈ ಗಂಭೀರ ವಿಚಾರದ ಕುರಿತು ಬಿಲ್ಲವ ಸಂಘಟನೆಗಳು, ಸಮಾಜದ ಮುಖಂಡರು, ಮಹಿಳಾ ಆಯೋಗದ ಪ್ರತಿನಿಧಿಗಳು ಸೇರಿ ಸಭೆ ನಡೆಸಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ನ್ಯಾಯಕ್ಕಾಗಿ ಕೇಳಿಕೊಳ್ಳಲಾಯಿತು. ಆ ಸಂದರ್ಭದಲ್ಲಿ ನ್ಯಾಯ ದೊರಕಿಸುವ ಭರವಸೆಯ ಮಾತುಗಳನ್ನು ನೀಡಲಾಗಿತ್ತು. *ಆದರೆ ಇಷ್ಟರವರೆಗೆ ಯಾವುದೇ ಸ್ಪಷ್ಟ ಕ್ರಮ ಅಥವಾ ಪ್ರತಿಕ್ರಿಯೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಲಭಿಸಿಲ್ಲ.

ಈ ಹಿನ್ನೆಲೆಯಲ್ಲಿ,
ದಿನಾಂಕ : 17-12-2025 (ಬುಧವಾರ)
ಸಮಯ : ಮಧ್ಯಾಹ್ನ 3:00 ಗಂಟೆಗೆ
ಸ್ಥಳ : ಬ್ರಹ್ಮಾವರ ಪೊಲೀಸ್ ಠಾಣೆ ಮುಂಭಾಗ

ನ್ಯಾಯಕ್ಕಾಗಿ

🚩“ಬೃಹತ್ ಪ್ರತಿಭಟನೆ” 🚩

ನಡೆಯಲಿದೆ.

ಈ ಪ್ರತಿಭಟನೆಯಲ್ಲಿ ಯಾವುದೇ ಜಾತಿ–ಮತ–ಪಕ್ಷ ಭೇದವಿಲ್ಲದೆ, ಪೊಲೀಸ್ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ, ಅನ್ಯಾಯಕ್ಕೊಳಗಾದ ಕುಮಾರಿ ಅಕ್ಷತಾ ಪೂಜಾರಿ ಮತ್ತು ಅವರ ತಾಯಿಗೆ ನ್ಯಾಯ ದೊರಕಿಸುವ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸೋಣ.

ಪೊಲೀಸ್ ದೌರ್ಜನ್ಯವನ್ನು ಕೊನೆಗೊಳಿಸೋಣ!

ನ್ಯಾಯಕ್ಕಾಗಿ ಒಂದಾಗಿ ನಿಲ್ಲೋಣ

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ

LEAVE A REPLY

Please enter your comment!
Please enter your name here