ಸ್ವಚ್ಛತೆಯ ಸ್ವಯಂ ಜಾಗೃತಿ ಅದು ರಾಷ್ಟ್ರೀಯ ಆಂದೋಲನವಾಗಲಿ :ಭರತ್ ನಿಡ್ಪಳ್ಳಿ 

0
33

ಸ್ವಚ್ಛತೆಯು ಮನೆ ಮನೆಯಿಂದ ಸ್ವಯಂ ಜಾಗೃತಿಯೊಂದಿಗೆ ಪ್ರಾರಂಭವಾಗಬೇಕು. ಅದು ಸಾಮೂಹಿಕವಾಗಿ ಪರಿವರ್ತನೆಗೊಂಡು ರಾಷ್ಟ್ರೀಯ ಜಾಗ್ರತಿಯನ್ನು ಉಂಟು ಮಾಡುತ್ತದೆ. ಆವಾಗ ಮಹಾತ್ಮಾ ಗಾಂಧೀಜಿಯವರು ಕಂಡ ಸ್ವಚ್ಛ ಭಾರತ್ ಪರಿಕಲ್ಪನೆಯು ಸಾಕಾರಗೊಳ್ಳುತ್ತದೆ ಎಂದು ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕರಾದ ಶ್ರೀ ಭರತ್ ನಿಡ್ಪಳ್ಳಿ ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಂಗಳೂರು ಶಾಖೆಯ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ದ್ಯೇಯದೊಂದಿಗೆ ನಡೆದ ಹನ್ನೆರಡನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶ್ರಮದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಪ್ರವೀಣ್ ಶೇಟ್ ನಾಗ್ವೇಕರ್ ಅವರು ವಿಶ್ವಕರ್ಮ ಬ್ಯಾಂಕ್ ಬ್ಯಾಂಕಿಂಗ್ ಚಟುವಟಿಕೆಗಳೊಂದಿಗೆ ಸಮಾಜಮುಖಿಯಾಗಿ ಸ್ವಚ್ಛ ಭಾರತ್ ನಂತಹ ಗುರುತರವಾದ ಕಿಷ್ಟಕರ ಕಾರ್ಯವನ್ನು ಸಮಾಜದ ಎಲ್ಲರನ್ನೂ ಸೇರಿಸಿಕೊಂಡು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯಾರ್ಹವೆಂದು ಹೇಳಿದರು. 

 ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ, ಕುದ್ರೋಳಿ ಯುವಕ ಮಂಡಲ(ರಿ.) ಇದರ ಅಧ್ಯಕ್ಷರಾದ ರಾಜೇಶ್ ಕುದ್ರೋಳಿ, ಅಂಜನ ಪಟೇಲ್ ಸಮಾಜ ಟ್ರಸ್ಟ್ ಅಳಕೆ ಇದರ ಅಧ್ಯಕ್ಷ ಶ್ರೀ ಪಂಚಾರಾಮ್ ಹಾಗೂ ಲಯನ್ಸ್ ಕ್ಲಬ್ ಕೊಡಿಯಾಲ್ ಬೈಲ್ ಇದರ ಅಧ್ಯಕ್ಷರಾದ ಮೋಹನ್ ಕೊಪ್ಪಳ ಇವರುಗಳು ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.

 ಬಳಿಕ ಡೊಂಗೆರೆಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಪರಿಸರದಿಂದ ಡೊಂಗರಕೇರಿ ಹಾಗೂ ಅಳಕೆ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ಜರುಗಿತು.

 ವಿಶ್ವಕರ್ಮ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಬಿ. ಗುರುಪ್ರಸಾದ್ ಶೆಟ್ಟಿ, ಬಿಜು ಜಯ ಆಚಾರ್, ಹರಿಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಸಂತ ಅಡ್ಯಂತಾಯ, ಡೊಂಗರೆಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಶ್ರೀನಿವಾಸ್ ಪುಂಡಲೀಕ ಶೇಟ್ ಹಾಗೂ ಸಮಿತಿ ಸದಸ್ಯರು, ವೈಶ್ಯ ಸೇವಾ ಸಮಿತಿ ಇದರ ಅಧ್ಯಕ್ಷರಾದ ನಾಗಭೂಷಣ್ ಶೇಟ್ ಹಾಗೂ ಸದಸ್ಯರು, ವೈಶ್ಯ ಯುವಕ ವೃಂದ (ರಿ.) ಇದರ ಅಧ್ಯಕ್ಷರಾದ ಆದಿತ್ಯ ಶೇಟ್ ಹಾಗೂ ಸದಸ್ಯರು, ವೈಶ್ಯ ಮಹಿಳಾ ಮಂಡಳಿ (ರಿ.) ಇದರ ಅಧ್ಯಕ್ಷೆ ಶ್ರೀಮತಿ ರೇಖಾ ಶೇಟ್ ಹಾಗೂ ಸದಸ್ಯರು, ಲಯನ್ಸ್ ಹಾಗೂ ಲಿಯೋ ಕ್ಲಬ್ ಕೊಡಿಯಾಲಬೈಲ್ ಇದರ ಕಾರ್ಯದರ್ಶಿಗಳಾದ ಸತ್ಯೇಂದ್ರ ಭಟ್ ಹಾಗೂ ಸೂರಜ್ ಆಚಾರ್ಯ ಕದ್ರಿ ಹಾಗೂ ಸದಸ್ಯರು. ಅಂಜನ(ಪಟೇಲ್) ಸಮಾಜ ಟ್ರಸ್ಟ್ (ರಿ.) ನ ಪ್ರಮುಖರಾದ ಶ್ರೀ ಮೂಲರಾಮ್ ಹಾಗೂ ಸದಸ್ಯರು, ಕುದ್ರೋಳಿ ಯುವಕ ಮಂಡಲ (ರಿ.) ನ ಪ್ರಮುಖರಾದ ಪ್ರವೀಣ್ ಸಾಲ್ಯಾನ್, ಪ್ರವೀಣ್ ಕುದ್ರೋಳಿ, ಮಹೇಶ್ ಶೆಟ್ಟಿ ಅಳಕೆ ಹಾಗೂ ಸದಸ್ಯರು,  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾಳಿಕಾಂಬಾ ಶಾಖೆ ಇದರ ಹಿರಿಯ ಯೋಗ ಶಿಕ್ಷಕರಾದ ಶ್ರೀ ಉಮೇಶ್ ಆಚಾರ್, ಲೋಕೇಶ್ ಆಚಾರ್, ರವಿರಾಜ್ ಆಚಾರ್, ಜಯಂತಿ ಎಲ್ ಆಚಾರ್, ಜ್ಯೋತಿ ಪ್ರಸಾದ್ ಆಚಾರ್ ಹಾಗೂ ಸದಸ್ಯರು, ಬೆಸೆಂಟ್ ಮಹಿಳಾ ಕಾಲೇಜು  ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಶ್ರೀಮತಿ ರವಿಪ್ರಭಾ, ಕಾರ್ಯದರ್ಶಿಗಳಾದ ಪ್ರಕೃತಿ.ಪಿ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ಹಾಗೂ ಸ್ವಯಂಸೇವಕ ವಿದ್ಯಾರ್ಥಿಗಳು, ಕಾಳಿಕಾಂಬ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಗದೀಶ್ ಸಿದ್ದಕಟ್ಟೆ ಮತ್ತು ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ್ ಹಳೇಜಿ ಮತ್ತು ಸದಸ್ಯರು, ಬ್ಯಾಂಕಿನ್ ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿಗಳು ಸ್ವಯಂಸೇವಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು. 

LEAVE A REPLY

Please enter your comment!
Please enter your name here