ಮುಲ್ಕಿ:ಡಿವೈಡರ್ ಡಿಕ್ಕಿ ಹೊಡೆದು ಹೆದ್ದಾರಿ ಬದಿ ಪಿಕಪ್ ಪಲ್ಟಿ

0
114

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಬಳಿ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿಸಿ ಹೆದ್ದಾರಿ ಡಿವೈಡರ್ ಗೆ ಡಿಕ್ಕಿ ಹೊಡೆದು ಹೆದ್ದಾರಿ ಬದಿ ಪಲ್ಟಿಯಾಗಿದ್ದು ಚಾಲಕ ಪವಾಡ ಸದೃಶ ಪಾರಾಗಿದ್ದಾರೆ.
ಚಾಲಕ ದಾವಣಗೆರೆ ನಿವಾಸಿ ಶಿವಕುಮಾರ್ ತಮ್ಮ ಪಿಕಪ್ ವಾಹನದಲ್ಲಿ ಬುಧವಾರ ಮಧ್ಯಾಹ್ನ ದಾವಣಗೆರೆಯಿಂದ ಮಂಗಳೂರಿಗೆ ತರಕಾರಿ ಹೇರಿಕೊಂಡು ಹೊರಟಿದ್ದು ಸಂಜೆ 6.30 ರ ಸಮಾರಿಗೆ ಮುಲ್ಕಿ ಸಮೀಪದ ಕೋಲ್ನಾಡು ತಲುಪುತ್ತಿದ್ದಂತೆ ನಿದ್ರೆ ಮಂಪರಿನಲ್ಲಿ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಹೆದ್ದಾರಿ ಬದಿ ಪಲ್ಟಿಯಾಗಿದೆ.
ಸ್ಥಳಕ್ಕೆ ಹೆದ್ದಾರಿ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು ಕ್ರೇನ್ ಮೂಲಕ ತೆರವುಗೊಳಿಸಲಾಯಿತು.

LEAVE A REPLY

Please enter your comment!
Please enter your name here