ಕಾರ್ನಾಡ್ : ರೋಡ್ ರೋಲರ್ ಗೆ ಕಂಟೈನರ್ ಡಿಕ್ಕಿ -ವಾಹನ ಸಂಚಾರ ಅಸ್ತವ್ಯಸ್ತ

0
106

ಮುಲ್ಕಿ: ಕಾರ್ನಾಡ್ ಬಳಿ ರಸ್ತೆ ಡಾಮರೀಕರಣ ನಡೆಸುತ್ತಿದ್ದ ರೋಡ್ ರೋಲರ್ ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದು , ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ . ಕಾರ್ನಾಡ್ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಿಂದ ಕಾರ್ನಾಡ್ ಪೇಟೆ ಲೋಕೋಪಯೋಗಿ ಹೆದ್ದಾರಿ ರಸ್ತೆ ಡಾಮರೀಕರಣ ನಡೆಯುತ್ತಿದ್ದು , ಮಂಗಳೂರು ಕಡೆಯಿಂದ ಕಾರ್ನಾಡ್ ಪೇಟೆಯೊಳಗೆ ಬರುತ್ತಿದ್ದ ಬೃಹದಾಕಾರದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರೋಡ್ ರೋಲರ್ ಗೆ ಡಿಕ್ಕಿ ಹೊಡೆದಿದೆ , ಈ ಸಂದರ್ಭದಲ್ಲಿ ಕಂಟೈನರ್ ಲಾರಿಯ ಒಂದು ಚಕ್ರ ಸ್ಫೋಟಗೊಂಡಿದ್ದು ಇನ್ನೊಂದು ಚಕ್ರಕ್ಕೆ ಹಾನಿಯಾಗಿದೆ , ಕಂಟೈನರ್ ಲಾರಿ ಮತ್ತು ರೋಡ್ ರೋಲರ್ ನಡುವೆ ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು , ಕೂಡಲೇ ಸ್ಥಳಕ್ಕೆ ಮುಲ್ಕಿ ಪೊಲೀಸರು ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ದಾವಿಸಿ ಕ್ರೇನ್ ಮೂಲಕ ರೋಡ್ ರೋಲರನ್ನು ಬದಿಗೆ ಸರಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ . ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ರಸ್ತೆ ಡಾಮರೀಕರಣ ಕಾಮಗಾರಿ ನಡೆಯುತ್ತಿದ್ದು , ಕಳೆದ ದಿನಗಳ ಹಿಂದೆ ಇದೇ ರೀತಿ ಕಾರು ಚಾಲಕನ ಆತುರದಿಂದ ಚಲಾಯಿಸಿ ಅಪಘಾತ ಸಂಭವಿಸಿ , ಮಾತಿನ ಚಕಮಕಿ ನಡೆದಿತ್ತು .

LEAVE A REPLY

Please enter your comment!
Please enter your name here