ಆದರ್ಶ ಗ್ರಾಮಾಭಿವೃದ್ಧಿ ಸಂಸ್ಥೆ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ

0
59

ವರದಿ ರಾಯಿ ರಾಜ ಕುಮಾರ
ಹೊಸಬೆಟ್ಟು ಸಮೃದ್ಧಿ ಸಂಜೀವಿನಿ ಪಂಚಾಯತ್ ಮಟ್ಟದ ಒಕ್ಕೂಟದ ಸಹಕಾರದಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಗಾರ ಡಿಸೆಂಬರ್ 20 ರಂದು ಸಮಾಜ ಮಂದಿರದಲ್ಲಿ ಉದ್ಘಾಟಿಸಲ್ಪಟ್ಟಿತು. ದೀಪ ಬೆಳಗಿ ಕಾರ್ಯಗಾರವನ್ನು ಉದ್ಘಾಟಿಸಿದ ಮೂಡುಬಿದಿರೆ ತಾಲೂಕು ಪಂಚಾಯತ್ನ ಮಹಾತ್ಮ ಗಾಂಧಿ ನರೇಗಾದ ಸಾಯಿಶ್ ಚೌಟ ಖಾಸಗಿ ಸಂಸ್ಥೆಗಳು ತಳ ವರ್ಗದ ಅಭಿವೃದ್ಧಿಯನ್ನು ಬಹಳ ಉತ್ತಮವಾಗಿ ನಡೆಸುತ್ತಿವೆ. ಮಹಿಳೆಯರು ಸಮರ್ಪಣಾ ಭಾವದಿಂದ ಕುಟುಂಬವನ್ನು ಸಲಹುದರೊಂದಿಗೆ ಸಬಲೀಕರಾಗಿ ಇತರರಲ್ಲೂ ಜಾಗೃತಿ ಮೂಡಿಸಿ ಸ್ವತಹ ಬೆಳಗಿ, ಇತರರನ್ನು ಬೆಳಗಿಸುತ್ತಿರುವುದು ಸಂತಸದ ಸಂಗತಿ ಎಂದು ಶುಭ ಹಾರೈಸಿದರು.

ನಿರ್ದೇಶಕಿ ಶೆರ್ಲಿ ಟಿ ಬಾಬು ಮಾತನಾಡಿ ಪುರುಷರ ಬೆಂಬಲದಿಂದ ಮಹಿಳೆಯರು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸಲು ಸಾಧ್ಯವಾದುದು ಅಭಿನಂದನೀಯ ಎಂದರು. ಮೂಡುಬಿದಿರೆ ವಲಯ ಸ್ತ್ರೀಶಕ್ತಿ ಮೇಲ್ವಿಚಾರಕಿ ಶುಭ ಮಾತನಾಡಿ ರಾಸಾಯನಿಕ ರಹಿತ ಗುಣಮಟ್ಟದ ಉತ್ಪನ್ನ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಾಧ್ಯ ಎಂದರು. ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್ ಪ್ರಾಸ್ತಾವಿಕ ಮಾತಿನಲ್ಲಿ ಸ್ವಾವಲಂಬನೆಯಿಂದ ಸ್ವ ಸಹಾಯ ಗುಂಪುಗಳು ಸಶಕ್ತರಾಗಿ ಕೌಶಲ್ಯಯುಕ್ತವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ಸಾಮಾಜಿಕ ಹಾಗೂ ಆರ್ಥಿಕ ಸಬಲತೆಯಿಂದ ಸಾಧ್ಯವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಮಹಿಳೆಯರು ಅವಲಂಬನೆ ರಹಿತವಾಗಿ ಬೆಳೆಯುತ್ತಿರುವುದಕ್ಕೆ ಮೆಚ್ಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಗಮದ ಅಧ್ಯಕ್ಷ ವಸಂತಿ ಶೆಟ್ಟಿ ಮಾತನಾಡಿ ಕಡೆಗಣಿಸಲ್ಪಟ್ಟವರೇ ಒಂದಾಗಿ ಸಂಸ್ಥೆಯನ್ನು ಬೆಳೆಸುತ್ತಿರುವುದು, ಸಂಸ್ಥೆ ಬೆಳಗುತ್ತಿರುವುದು ಶುಭ ಸೂಚನೆ ಎಂದರು. ವೇದಿಕೆಯಲ್ಲಿ ನಿರ್ದೇಶಕ ಇಮಾನ್ಯುಯಲ್ ಮೋನಿಸ್, ದ ಕ ಜಿಲ್ಲಾ ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಹೊಸಬೆಟ್ಟು ಗ್ರಾಮ ಪಂಚಾಯತ್ ಪಿ ಡಿ ಓ ಸವಿತಾ ಕುಮಾರಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ನಿಖಿಲ್ ಹಾಜರಿದ್ದರು. ಗೀತಾ ಜೈನ್ ಸ್ವಾಗತಿಸಿದರು. ಮಮತಾ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಾ ವಂದಿಸಿದರು.


.

LEAVE A REPLY

Please enter your comment!
Please enter your name here