ಡಿ.22-26 ರವರೆಗೆ ಶ್ರೀ ಕ್ಷೇತ್ರ ತೋಡಾರಿನಲ್ಲಿ ಕಾಲಾವಧಿ ಜಾತ್ರೆ

0
183

ಮೂಡುಬಿದಿರೆ : ಶ್ರೀ ಕೊಡಮಣಿತ್ತಾಯ ದೈವಸ್ಥಾನ ಬೈದರ್ಕಳ ಗರಡಿ ಶ್ರೀ ಕ್ಷೇತ್ರ ತೋಡಾರು ಕಾಲಾವಧಿ ಜಾತ್ರೆಯು 22- 12-2025 ಸೋಮವಾರದಿಂದ 26-12-2025 ಶುಕ್ರವಾರದವರೆಗೆ ನಡೆಯಲಿದೆ.

* ದಿನಾಂಕ 22-12-2025 ರಂದು ಸೋಮವಾರ ರಾತ್ರಿ ಗಂಟೆ 8ಕ್ಕೆ ಧ್ವಜಾರೋಹಣ, ತುಡರ ಬಲಿ, ಅನ್ನಸಂತರ್ಪಣೆ ನಡೆಯಲಿದೆ.

*ದಿನಾಂಕ 23-12-2025 ಮಂಗಳವಾರ ಸಂಜೆ 6.30ಕ್ಕೆ ಶ್ರೀ ದುರ್ಗಾ ನಮಸ್ಕಾರ ಪೂಜೆ ನಂತರ ಅನ್ನಸಂತರ್ಪಣೆ ಹಾಗೂ ಶ್ರೀ ದೈವದ ನೇಮ ನಡೆಯಲಿದೆ.

*ದಿನಾಂಕ 24-4-2025 ಬುಧವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಹೂವಿನ ಪೂಜೆ ಜರುಗಲಿದೆ. ಮಧ್ಯಾಹ್ನ 12.30ರಿಂದ ಮಹಾಅನ್ನಸಂತರ್ಪಣೆ ಹಾಗೂ ರಾತ್ರಿ 7 ಗಂಟೆಯಿಂದ 10ರವರೆಗೆ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 8 ಗಂಟೆಗೆ ಜೋಡುಮೂರ್ತಿ ಬಲಿ, ಹಾಗೂ 10 ಗಂಟೆಗೆ ಶ್ರೀ ಕೊಡಮಣಿತ್ತಾಯ ದೈವದ ನೇಮ ಜರುಗಲಿದೆ.

*ದಿನಾಂಕ 25-12-2025 ಗುರುವಾರ ಸಂಜೆ 7.30 ರಿಂದ ಅನ್ನ ಸಂತರ್ಪಣೆ ಹಾಗೂ 10 ಗಂಟೆಗೆ ಬೈದರ್ಕಳ ನೇಮ ನಡೆಯಲಿದೆ.

*ದಿನಾಂಕ 26-12-2025 ರಂದು ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ಧ್ವಜಾರೋಹಣ, ಓಕುಳಿ ಗಂಧ ಪ್ರಸಾದ ಹಾಗೂ ಭಂಡಾರ ಇಳಿಯಲಿದೆ.

    LEAVE A REPLY

    Please enter your comment!
    Please enter your name here