ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ತಾಲೂಕಿನ ಅಳಿಯೂರು ಗ್ರಾಮದ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಕಾರ್ಯ ನಿರ್ವಹಣೆ ಹಾಗೂ ಸಮಯ ಪಾಲನೆಯ ಅಗತ್ಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮೂಡುಬಿದಿರೆ ಸವಿ ಫೌಂಡೇಶನ್ ನ ಚೇರ್ಮನ್ ಡಾಕ್ಟರ್ ಸಂದೀಪ್ ನಾಯಕ್ ಅವರು ಕಾರ್ಯಗಾರವನ್ನು ನಡೆಸಿಕೊಟ್ಟರು. ಹಲವಾರು ಉದಾಹರಣೆಗಳನ್ನು ಮೂಲಕ ಪ್ರಾಯೋಗಿಕ ನಿರ್ವಹಣೆಯ ಉಪಯೋಗ ಹಾಗೂ ಅವಶ್ಯಕತೆಯ ವಿವರಣೆಯನ್ನು ಪ್ರಸ್ತುತಪಡಿಸಿದ್ದರು. ಪಿಯು ತರಗತಿಯ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು, ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ್ ಸ್ವಾಗತಿಸಿ ವಂದಿಸಿದರು.
.

