ಜ.25 : ಕುಲಾಲ ಸಂಘ (ರಿ) ಕಾಪು ವಲಯ ಅಶ್ರಯದಲ್ಲಿ ಜಿಲ್ಲಾ ಮಟ್ಟದ ಕುಲಾಲ ಕ್ರೀಡೋತ್ಸವ 2026

0
91

ಕಾಪು : ಸ್ನೇಹಕ್ಕಾಗಿ ಕ್ರೀಡೆ, ಏಳಿಗೆಗಾಗಿ ಕ್ರೀಡೆ, ಒಗ್ಗಟ್ಟಿಗಾಗಿ ಕ್ರೀಡೆ ಎಂಬ ನಿಟ್ಟಿನಲ್ಲಿ ತಾಲೂಕಿನ ಕುಲಾಲ ಸಂಘ(ರಿ)ಕಾಪು ವಲಯ ಹಾಗೂ ಮಹಿಳಾ ಘಟಕ, ಕಾಪು ಕುಲಾಲ ಯುವ ವೇದಿಕೆ ನೇತೃತ್ವದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕುಲಾಲ ಸಮಾಜ ಬಾಂಧವರಿಗೆ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟ, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ 100 ಮೀ ಓಟ,ಗುಂಡು ಎಸೆತ,ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮ ಜನವರಿ 25 ರಂದು ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ನಡೆಯಲಿದೆ.‌

ಆಯಾಯ ಸ್ಪರ್ಧೆಗೆ ನಗದು ಜೊತೆಗೆ ಕುಲಾಲ ಶಾಶ್ವತ ಫಲಕ ನೀಡಲಾಗುವುದು ಎಂದು ಕಾಪು ಕುಲಾಲ ಸಂಘದ ಅಧ್ಯಕ್ಷರು , ಪ್ರಸ್ತುತ ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಹರೀಶ್ ಮೂಲ್ಯ ಬೆಳ್ಳಿಬೆಟ್ಟು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಗೆ ಸಂಪರ್ಕಿಸಬಹುದು…9686122892,9964194509,9686945501…

ಮಾಹಿತಿ ಕೃಪೆ : ಉದಯ ಕುಲಾಲ್ ಕಳತ್ತೂರು.

LEAVE A REPLY

Please enter your comment!
Please enter your name here