ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಮೂಡಿಸಲು ಹಾಗೂ ಜನರ ಆರೋಗ್ಯವನ್ನು ಕಾಪಾಡುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ತುಂಬಾ ಸಹಕಾರಿ – ಲಯನ್ ವೆಂಕಟೇಶ್ ಹೆಬ್ಬಾರ್

0
57

ವಿಜಯ ಕಾಲೇಜು ಮುಲ್ಕಿ ಇದರ ರಾಷ್ಟ್ರೀಯ ಸೇವಾ ಯೋಜನ ಘಟಕವು ಲೈನ್ಸ್ ಕ್ಲಬ್ ಇನ್ಸ್ಪೈರ್ ಬಪ್ಪನಾಡು ಇದರ ಸಹಯೋಗದೊಂದಿಗೆ, ಎಜೆ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟನೆ ಮಾಡಲಾಯಿತು.

ಈ ಕಾರ್ಯಕ್ರಮ ವನ್ನು ಲೈನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಪಾಯರ್ ಇದರ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ್ ಹೆಬ್ಬಾರ್ ಇವರು ಉದ್ಘಾಟಿಸಿ ಎನ್ಎಸ್ಎಸ್ ನಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯವನ್ನು ಕಲಿಸುತ್ತದೆ ಮತ್ತು ಸಮಾಜ ಸೇವೆಯನ್ನು ಮಾಡಲು ಅವಕಾಶವನ್ನು ಒದಗಿಸಿಕೊಡುತ್ತದೆ ಎಂದು ತಿಳಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಲಿಮಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ಡಿ ಪ್ರಭು ಇವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಪ್ರಜೆಗಳಾಗಿ ಬಾಳಬಹುದು ಎಂದು ಹೇಳಿದರು.

ಅಂತೆಯೇ ಈ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಲೈನ್ಸ್ ಕ್ಲಬ್ ಮುಲ್ಕಿ ಇದರ ಸದಸ್ಯರಾದ ಲಯನ್ ಉದಯ್ ಶೆಟ್ಟಿ , ಲೈನ್ಸ್ ಕ್ಲಬ್ ಅಪ್ಪನಾಡು ಇನ್ಸ್ಪೈರ್ ಇದರ ಸದಸ್ಯರಾದ ಲಯನ್ ಪ್ರತಿಭಾ ಹೆಬ್ಬಾರ್ , ಎಜೆ ಆಸ್ಪತ್ರೆ ಇದರ ವೈದ್ಯಾಧಿಕಾರಿಗಳಾದ ಡಾಕ್ಟರ್ ಶರದಿ, ಶಾಲೆಯ ಸಹ ಶಿಕ್ಷಕಿ ಜೆಸಿಂತಾ ಡಿಸೋಜಾ ಇವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೂರದ ಮೂಡಿಗೆರೆ ಚಿಕ್ಕಮಂಗಳೂರು ಹಾಸನ ಜಿಲ್ಲೆಗಳಲ್ಲಿ ಎ ಜೆ ಆಸ್ಪತ್ರೆಯ ವೈದ್ಯಕೀಯ ಶಿಬಿರವನ್ನು ಜರಗಿಸಲು ಸಹಕರಿಸಿದ ಲಯನ್ಸ್ ಕ್ಲಬ್ ಮುಲ್ಕಿ ಇದರ ಸದಸ್ಯರಾದ ಲಯನ್ ಉದಯ ಶೆಟ್ಟಿ ಇವರನ್ನು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇದರ ವತಿಯಿಂದ ಗೌರವಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅರುಣ ಇವರು ಸ್ವಾಗತಿಸಿ, ಶ್ರಾವ್ಯ ಇವರು ವಂದಿಸಿದರು ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here