ಕೃಷಿಗೆ ಪೂರಕವಾಗಿ ತುಳುನಾಡಿನಲ್ಲಿ ಜನಪ್ರಿಯತೆ ಹೊಂದಿರುವ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಆದ್ಯ ಕರ್ತವ್ಯ : ಉದ್ಯಮಿ ಶಶಿಧರ್ ಶೆಟ್ಟಿ ಮಸ್ಕತ್

0
83

ಮುಲ್ಕಿ : ಕೃಷಿಗೆ ಪೂರಕವಾಗಿ ತುಳುನಾಡಿನಲ್ಲಿ ಜನಪ್ರಿಯತೆ ಹೊಂದಿರುವ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಆದ್ಯ ಕರ್ತವ್ಯ ಎಂದು ಉದ್ಯಮಿ ಶಶಿಧರ್ ಶೆಟ್ಟಿ ಮಸ್ಕತ್ ಹೇಳಿದರು
ಅವರು ಮುಲ್ಕಿ ಸೀಮೆ ಅರಸು ಕುಂಬಳ 2025 ರ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾಧಕರನ್ನು ಗೌರವಿಸಿ ಮಾತನಾಡಿದರು.

ಶಾಸಕ ಉಮಾನಾಥ ಕೋಟ್ಯಾನ್ ಅರಸು ಕಂಬಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು ಮುಖ್ಯ ಅತಿಥಿಗಳಾಗಿ ಸುವರ್ಣ ನ್ಯೂಸ್ ನಿರೂಪಕರಾದ ಪ್ರಶಾಂತ್ ನಾಥು, ಶ್ವೇತಾ ಆಚಾರ್ಯ, ಬಿಗ್ ಬಾಸ್ ಖ್ಯಾತಿಯ ಜಾಹ್ನವಿ, ಅವಿನಾಶ್ ಶೆಟ್ಟಿ, ಎಂಆರ್‌ಪಿಎಲ್ ಅಧಿಕಾರಿ ಸತೀಶ್,ಉದ್ಯಮಿ ಅಗರಿ ರಾಘವೇಂದ್ರರಾವ್, ವೇದ ಪ್ರಕಾಶ್,ಪ್ರಕಾಶ್ ಶೆಟ್ಟಿ ನಲ್ಯಗುತ್ತು,,ವಿ.ಕೆ ಶೆಟ್ಟಿ,,ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಭಾಸ್ಕರ್ ಸಾಲ್ಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಮುಲ್ಕಿ ಅರಮನೆ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಗೌತಮ್ ಜೈನ್, ಹಳೆಯಂಗಡಿ ಪ್ರಿಯ ದರ್ಶನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್, ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ದಿವಾಕರ ಸಾಮಾನಿ ಚೇಳಾಯರುಗುತ್ತು,ಅರಸು ಕಂಬಳ ಸಮಿತಿಯ ಮಹೀಮ್ ಹೆಗ್ಡೆ, ಶರತ್ ಕಾರ್ನಾಡ್, ಅಬ್ದುಲ್ ಅಜೀಜ್, ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಸಂಪತ್ ಶೆಟ್ಟಿ ತೋಕೂರುಗುತ್ತು ಸ್ವಾಗತಿಸಿದರು ವಿನೋದ್ ಸಾಲ್ಯಾನ್ ಬೆಳ್ಳಾಯರು ಧನ್ಯವಾದ ಅರ್ಪಿಸಿದರು ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೊಡುಗೈ ದಾನಿ ಜಯಕೃಷ್ಣ ಕೋಟ್ಯಾನ್ ಹಳೆಯಯಂಗಡಿ ರವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here