ಪಕ್ಷಿಕೆರೆ : ಹರಿಪಾದೆ ಧರ್ಮ ದೈವ ಜಾರಂತಯಾ ದೈವಸ್ಥಾನಕ್ಕೆ ಸಂಬಂಧಪಟ್ಟ ಮಾರ್ಲಚ್ಚಿಲ್ ದೈವದ ಜೀರ್ಣೋದ್ಧಾರಕ್ಕೆ ಊರಿನ ಹಾಗೂ ಪರವೂರಿನ ಹತ್ತು ಸಮಸ್ತರು ಸೇರಿಕೊಂಡು ಹರಿಪಾದೆ ಧರ್ಮ ದೈವ ಜಾರಾಂತಯ ದೈವಸ್ಥಾನದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರಾರದ ನಲ್ಯಗುತ್ತು ಪ್ರಕಾಶ್ ಟಿ ಶೆಟ್ಟಿಯವರ ಉಪಸ್ಥಿತಿಯಲ್ಲಿ ಊರಿನ ಹಾಗೂ ಪರವೂರಿನ ಹತ್ತು ಸಮಸ್ತರ ಸಮ್ಮುಖದಲ್ಲಿ ಹರಿಪಾದೆ ಧರ್ಮ ದೈವ ಜಾರಾಂತಯ ದೈವಸ್ಥಾನದಲ್ಲಿ ಸಭೆ ನಡೆಯಿತ್ತು.
ಸಭೆಯಲ್ಲಿ ಮಹರ್ಲಾಚ್ಚಿಲ್ ಪಂಜುರ್ಲಿ ದೇವಸ್ಥಾನ ಜೀರ್ಣೋದ್ಧಾರದ ಗೌರವಾಧ್ಯಕ್ಷರಾಗಿ ನಲ್ಯಗುತ್ತು ಪ್ರಕಾಶ್.ಟಿ.ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತ್ತು, ಅಧ್ಯಕ್ಷರಾಗಿ ರಾಮಯ್ಯ.ಟಿ. ಶೆಟ್ಟಿ ಶ್ರೀ ಹರಿ ಕೊಯಿಕುಡೆ ಇವರನ್ನು ಆಯ್ಕೆ ಮಾಡಲಾಯಿತ್ತು, ಉಪಾಧ್ಯಕ್ಷರಾಗಿ ಹರಿಪಾದೆ ಸಾನದ ಭಂಡಾರ ಮನೆ ಮಾಧವ ಸಾಲ್ಯಾನ್,ಪ್ರಧಾನ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಭಟ್ ಶ್ರೀಶೈಲ ಕೊಯಿಕುಡೆ ಜೊತೆ ಕಾರ್ಯದರ್ಶಿಯಾಗಿ ಸುದರ್ಶನ್ ಕುಕ್ಯಾನ್ ಮೊಗಪಾಡಿ ಹರಿಪಾದೆ ,ಕೋಶಾಧಿಕಾರಿಯಾಗಿ ಹರೀಶ್ ದೇವಾಡಿಗ ಹರಿಪಾದೆ ಇವರನ್ನು ಆಯ್ಕೆ ಮಾಡಲಾಯಿತ್ತು. ನಿರಂಜನ್ ಎಸ್ ಬಂಗೇರ ಸ್ವಾಗತಿಸಿದರು ಮತ್ತು ನವೀನ್ ಕುಮಾರ್ ಸಾನದ ಭಂಡಾರ ಮನೆ ವಂದಿಸಿದರು.

