ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಗ್ರಾಮದ ಹಳ್ಳಿಂಹೇರಿ ನಿವಾಸಿ ಅಜಯ್ ಕುಮಾರ್ (39) ಆತ್ಮಹತ್ಯೆಗೆ ಶರಣಾದವರು.
ಕೊಕ್ಕಡ ಪ್ರಾಥಮಿಕ ಆರೋಗ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕುಂಞಕಣ್ಣನ್ ಎಂಬವರ ಮಗನಾಗಿರುವ ಅಜಯ್ ಈ ಹಿಂದೆ ಸೌತಡ್ಕ ಅನ್ನಛತ್ರದಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಸ್ವಂತ ಆಟೋ ಖರೀದಿಸಿ ಓಡಿಸುತ್ತಿದ್ದರು. ಊಟ ಮಾಡಿದ ಬಳಿಕ ಮನೆಯಲ್ಲೇ ಅಜಯ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

