ನಿಟ್ಟೆ : ಜವಳಿ ಪಾರ್ಕ್ ಸಮಿತಿ ವತಿಯಿಂದ ಬೃಹತ್ ಹಕ್ಕುತಾಯ ಸಭೆ ಯಶಸ್ವಿ

0
23

ನಿಟ್ಟೆ ಪಂಚಾಯತ್ ಬಳಿ ಜವಳಿ ಪಾರ್ಕ್ , ಜವಳಿ ಪಾರ್ಕ್ ಸಮಿತಿ ವತಿಯಿಂದ ಬೃಹತ್ ಹಕ್ಕುತಾಯ ಸಭೆ ನಿನ್ನೆ ರವಿವಾರ ಸಂಜೆ ಜರುಗಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಎಲ್ಲಾ ಕಡೆ ಬಿಜೆಪಿ ಆಡಳಿತವಿದ್ದರೂ ಕಾರ್ಕಳ ಕ್ಷೇತ್ರದಲ್ಲಿ ಮಾತ್ರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.

ಶಾಸಕರ ಸಂಕಲ್ಪ ಸರಿಯಿಲ್ಲದ ಕಾರಣ ಪರುಶುರಾಮ ಥಿಮ್ ಪಾರ್ಕ್ ಎಣ್ಣೆ ಹೊಳೆಯ ಏತ ನೀರಾವರಿ ಯೋಜನೆ ಹಾಗೂ ನಿಟ್ಟೆಯ ಜವಳಿ ಪಾರ್ಕ್ ವರೆಗೆ ಎಲ್ಲ ದೊಡ್ಡ ಯೋಜನೆಗಳು ಹಳ್ಳ ಹಿಡಿದಿವೆ. ಮಾನ್ಯ ಶಾಸಕರ ಕಿಟ್ ಬ್ಯಾಕ್ ಭೀತಿಯಿಂದಾಗಿ ಯಾವ ಟೆಂಡರ್ ದಾದರೂ ಟೆಂಡರ್ ಹಾಕಲು ಮುಂದೆ ಬರುತ್ತಿಲ್ಲ ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ಇವರ ಶಾಮಯಾನಗಳು ಕುರ್ಚಿ ಟೇಬಲಗಳು ಊರೂರು ಸುತ್ತುತ್ತವೆ ಎಂದು ವ್ಯಂಗ್ಯ ವಾಡಿದರು.

ಜವಳಿ ಪಾರ್ಕ್ ನ ಹೋರಾಟ ಸಮಿತಿಯ ಮುಖ್ಯಸ್ಥರಾದ ನೇಮರಾಜ ರೈ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಕಳೆದ ಆರು ವರ್ಷಗಳಿಂದ ಜವಳಿ ಪಾರ್ಕ್ ಯೋಜನೆ , ಮರಣ ಶೈಎ ಯಲ್ಲಿದೆ. ಶಿಗ್ಗಾಂ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ಯೋಜನೆಗಳು ಯಶಸ್ವಿ ಆಗುತ್ತಿರುವಾಗ ಕಾರ್ಕಳದಲ್ಲಿ ಮಾತ್ರ ಈ ಯೋಜನೆ ಯಾಕೆ ಸಾಧ್ಯವಾಗುತ್ತಿಲ್ಲ. ಜವಳಿ ಪಾರ್ಕ್ ಗೆ ಮೀಸಲಿಟ್ಟ 15 ಎಕರೆ ಜಾಗದಲ್ಲಿ ಬೆಲೆಬಾಳುವ ಮರಗಳನ್ನು ಕಡಿದು ಅದ್ದೂರಿಯಾಗಿ ಭೂಮಿ ಪೂಜೆ ಮಾಡುವ ಅವಶ್ಯಕತೆ ಏನಿತ್ತು. ಜನಸೇವಕರಾದ ಶಾಸಕರನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಮಾತನಾಡಿ ಜವಳಿ ಪಾರ್ಕ್ ಮೂಲಕ ಉದ್ಯೋಗ ನೀಡುವ ಭರವಸೆ ನೀಡಿ ಶಾಸಕರು ಕಾರ್ಕಳ ಕ್ಷೇತ್ರಕ್ಕೆ ಮೂರು ಅಡ್ಡ ನಾಮ ಹಾಕಿದ್ದಾರೆ. ಎಣ್ಣೆ ಹೊಳೆ ಪರಶುರಾಮ ತಿಂ ಪಾರ್ಕ್ ಮತ್ತು ನಿಟ್ಟೆಯ ಜವಳಿ ಪಾರ್ಕ್ ಇವೆಲ್ಲವೂ ಕೇವಲ ಘೋಷಣೆಗಳಾಗಿ ಉಳಿದಿದೆ. ನಮ್ಮ ಹಕ್ಕಿನ ಭಾಗವಾಗಿ ಈ ಹೋರಾಟ ಇನ್ನು ಮುಂದುವರೆಯಲಿದೆ ಎಂದು ಎಚ್ಚರಿಸಿದರು.

ವೇದಿಕೆಯಲ್ಲಿ ಪ್ರಮುಖರಾದ ಆನಂದ ಜೋಸೆಫ್, ಸುಪ್ರೀತ್ ಶೆಟ್ಟಿ, ಅನಿತಾ ಡಿಸೋಜ, ಮನೋಜ್ ಶೆಟ್ಟಿ, ಬಾನು ಭಾಸ್ಕರ್, ರಾಮಣ್ಣ ಶೆಟ್ಟಿ, ದಿವಾಕರ್, ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗಡೆ ಉಪಸ್ಥಿತರಿದ್ದು ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here