ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಆಯ್ಕೆ 

0
92

 ಹಾಸನದ ಐ ಬಿ ಯಲ್ಲಿ  ” ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘ (ರಿ )”ದ ವತಿಯಿಂದ ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ ಪದಗ್ರಹಣ ಕಾರ್ಯಕ್ರಮ ಹಾಗೂ ಸಂಘ ದ ಕಾರ್ಯ ಚಟುವಟಿಕೆಯ ಹಾಗೂ ಅಭಿವೃದ್ಧಿ  ಬಗ್ಗೆ ಚರ್ಚಿಸಲಾಯಿತು . ಕಾರ್ಯಕ್ರಮದಲ್ಲಿ ನೆಲ, ಜಲ,  ನಾಡು ನುಡಿಗಾಗಿ ಶ್ರಮಿಸುತ್ತಿರುವ ಹಾಸನ ನಗರದ ಶಿಕ್ಷಕಿ.ಸಾಮಾಜಿಕ ಚಿಂತಕಿ. ಸಾಹಿತಿ.ಪತ್ರಕರ್ತೆ ಹಾಗೂ ಸಂಸ್ಥಾಪಕ ಅಧ್ಯಕ್ಷರು  ‘ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ’ ಬಹುಮುಖ ಪ್ರತಿಭೆ, ಸದಾ ಕ್ರಿಯಾಶೀಲರಾಗಿರುವ ಹಾಗೂ ಜಿಲ್ಲೆ, ರಾಜ್ಯ,ಮಟ್ಟದಲ್ಲಿ ಹಲವಾರು ಸಂಘ ಸಂಸ್ಥೆಯಲ್ಲಿ ಪದಾಧಿಕಾರವನ್ನು ಪಡೆದು  ಕಾರ್ಯನಿರ್ವಹಿಸುತ್ತಿದ್ದು, ನೂರಾರು ಪ್ರಶಸ್ತಿಗಳನ್ನು ಪಡೆದಿರುವ  ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ  ಪ್ರಶಸ್ತಿಗಳನ್ನು ಪಡೆದಿದ್ದು. ಯಾವುದೇ ಹಮ್ಮು ಇಲ್ಲದ ನೇರ ನುಡಿಯ ಮಾತುಗಾರ್ತಿ, ಮಹಿಳಾ ಸಾಧಕಿ, ಮಹಿಳಾ ಹೋರಾಟಗಾರ್ತಿ, ರೈತರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜ ಸೇವಕಿಯಾಗಿ  ಸಾಮಾಜಿಕ,ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತಿಕವಾಗಿ ಸೇವೆ ಸಲ್ಲಿಸಿದ್ದು ಹಲವಾರು ಪ್ರಕಾರಗಳಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ  ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದನ್ನು ಗಮನಿಸಿದ್ದು ಹಾಗೂ ಅಂಕಣಗಾರ್ತಿಯಾಗಿ, ಸಮಾಜದ ಹೊರೆಕೊರೆ ಯ ಬಗ್ಗೆ ತಿಳಿಸುತ್ತಿದ್ದು ಹಲವಾರು ಪ್ರಕಾರಗಳಲ್ಲಿ ಪತ್ರಿಕೆಗಳಿಗೆ ಬರೆಯುತ್ತಿರುವುದನ್ನು ಗಮನಿಸಿದ್ದು. ಎಲ್ಲ ಕ್ಷೇತ್ರ ದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ನಮ್ಮ ಸಂಘಟನೆಗೆ ಮಾದರಿಯಾಗಿದ್ದು ನಮಗೆ ಹೆಮ್ಮೆ ಯಿದೆ ಎಂದು ಸಂಘದ ಎಲ್ಲ ಪದಾಧಿಕಾರಿಗಳ ಬಹುಮತದಿಂದ . ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ” ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ” ಯಾಗಿ ಆಯ್ಕೆ ಮಾಡಲಾಗಿದೆ. ಎಂದು ರಾಜ್ಯದ್ಯಕ್ಷರಾದಂತಹ  ಸಿ. ಎ.ನಾಗರತ್ನ ರವರು ತಿಳಿಸಿದರು. 

ಪದಾಧಿಕಾರವನ್ನು ಪಡೆದಂತಹ ನಂತರ”ಜವಾಬ್ದಾರಿ ಹೆಚ್ಚುತ್ತಾ ಹೋಗುತ್ತಿದೆ. ಕಾರ್ಯ ಮಾಡುವುದು ಬಹಳಷ್ಟಿದೆ ಕೊನೆಯ ಉಸಿರು ಇರುವವರೆಗೂ  ನನ್ನ ಸೇವೆ ನೆಲ ಜಲ,  ರೈತರಿಗಾಗಿ,  ನನ್ನ ನಾಡು, ನುಡಿಗಾಗಿ ಗಾಗಿ, ದೇಶಕ್ಕಾಗಿ ಸೀಮಿತವಾಗಿದೆ” ಎಂದು  ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದರು.

ಕಾರ್ಯಕ್ರಮದಲ್ಲಿ  ಕುಮಾರಪ್ಪನವರು ರಾಜ್ಯ ಗೌರವಾಧ್ಯಕ್ಷರು  , ಗಿರೀಶ್ ಕೊಟ್ಟಾರೆ  ರಾಜ್ಯ ಪ್ರಧಾನ ಕಾರ್ಯದರ್ಶಿ,ಸುಕನ್ಯಾ ರಮೇಶ್ ರಾಜ್ಯ ಮಹಿಳಾ ಉಪಾಧ್ಯಕ್ಷೆ, ರವೀಶ್ ಅರಸೀಕೆರೆ ರಾಜ್ಯ ಕಾರ್ಯದರ್ಶರು, ರವಿ ಡಿ. ಕೆ. ಯುವಘಟಕದ ಅಧ್ಯಕ್ಷರು, ಹರೀಶ್ ಮೈಸೂರ್ ಉಸ್ತುವಾರಿ, ಬುಮೇಶ್ ರೈತಮುಖಂಡರು, ಇನ್ನೂ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here