ಕಳುವಾರು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ

0
119

ಕಳುವಾರು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಚೇಳಾರು* 574146 ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಪ್ರತಿ ಶಾಲೆಯಲ್ಲಿಯೂ ಜನವರಿ ತಿಂಗಳಿನಲ್ಲಿ “ರಸ್ತೆ ಸುರಕ್ಷತಾ ಮಾಸಾಚರಣೆ “ಯನ್ನು ನಡೆಸಲಾಗುತ್ತಿದೆ. ಈ ಪ್ರಯುಕ್ತ ಶಾಲೆಯಲ್ಲಿ ಟ್ರಾಫಿಕ್ ಇನ್ಸಪೆಕ್ಟರ್ ಶಿವಕುಮಾರ್, ಮಂಗಳೂರು (ಉತ್ತರ) ಬೈಕಂಪಾಡಿ, ಇವರು ರಸ್ತೆ ನಿಯಮಗಳು ಹಾಗೂ ಅವುಗಳ ಪಾಲನೆಯ ಬಗ್ಗೆೆ ಸವಿವರವಾಗಿ ನೀಡಿದರು. ಈ ವಿಚಾರವಾಗಿ ಮಕ್ಕಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು ಹಾಗೂ ವಿದ್ಯಾವಿಕಾಸ ಟ್ರಸ್ಟ್ ನ ಕೋಶಾಧಿಕಾರಿಯಾದ ಬಿ. ರವೀಂದ್ರ ರಾವ್, ವಿದ್ಯಾ ವಿಕಾಸ ಟ್ರಸ್ಟ್ ನ ಸದಸ್ಯರು ಹಾಗೂ ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಬಿ. ಗಂಗಾಧರ ಪೂಜಾರಿ, ವಿದ್ಯಾರ್ಥಿಗಳು, ಪೋಷಕರು, ಹೆತ್ತವರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here