ಹೋಂ ಡೆಲಿವರಿ ಜಾಲ ಬಲಪಡಿಸಿದ ಆಮ್ವೇ ಇಂಡಿಯಾ

0
28

ಮಂಗಳೂರು : ಆರೋಗ್ಯ ಮತ್ತು ಯೋಗಕ್ಷೇಮ ಅಗತ್ಯತೆಗಳನ್ನು ಬೆಂಬಲಿಸುವ ದೇಶದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿರುವ ಆಮ್ವೇ ಇಂಡಿಯಾ, ತನ್ನ ಹೋಂ ಡೆಲಿವರಿ ಜಾಲವನ್ನು ಮಹತ್ವವಾಗಿ ಬಲಪಡಿಸಿರುವುದಾಗಿ ಪ್ರಕಟಿಸಿದೆ.

ಈ ನೂತನ ಬದಲಾವಣೆಯಿಂದ ದೇಶಾದ್ಯಂತ ವಿತರಕರು ಹಾಗೂ ಗ್ರಾಹಕರಿಗೆ ವೇಗದ, ಹೆಚ್ಚು ವಿಶ್ವಾಸಾರ್ಹ ಹಾಗೂ ಉತ್ತಮ ಆರ್ಡರ್ ಅನುಭವವನ್ನು ಒದಗಿಸುವ ಸಂಸ್ಥೆಯ ಬದ್ಧತೆ ಮತ್ತಷ್ಟು ಸ್ಪಷ್ಟವಾಗುತ್ತದೆ ಎಂದು ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಜನೀಶ್ ಚೋಪ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಆಮ್ವೇ ತನ್ನ ಹೋಂ ಡೆಲಿವರಿ ಸಾಮರ್ಥ್ಯವನ್ನು ಗಮನಾರ್ಹವಾಗಿ ವೃದ್ಧಿಸಿಕೊಳ್ಳಲಾಗಿದ್ದು, ಡೆಲಿವರಿ ಸಮಯವನ್ನು ಶೇಕಡಾ 48 ರಷ್ಟು ಕಡಿತಗೊಳಿಸಿ (3.1 ದಿನಗಳಿಂದ 1.6 ದಿನಕ್ಕೆ) ಮಾರ್ಪಡಿಸಲಾಗಿದೆ. ಜೊತೆಗೆ, ಮಾರನೆಯ ದಿನದ ಡೆಲಿವರಿ ಪ್ರಮಾಣವನ್ನು ಶೇಕಡಾ 29ರಿಂದ 55ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು.

ಸೇವಾ ಜಾಲದ ವಿಸ್ತರಣೆಯ ಭಾಗವಾಗಿ, ಆಮ್ವೇ ಈಗ ಹಿಂದೆ ಇದ್ದ 8,000 ಪಿನ್‌ಕೋಡ್‌ಗಳಿಂದ 17,500ಕ್ಕೂ ಹೆಚ್ಚು ಪಿನ್‌ಕೋಡ್‌ಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದ್ದು, ದೇಶದ ಶೇಕಡಾ 90 ಪ್ರದೇಶಗಳನ್ನು ತನ್ನ ವ್ಯಾಪ್ತಿಗೆ ತಂದಿದೆ. ಬಲವಾದ ರಾಷ್ಟ್ರೀಯ ಲಾಜಿಸ್ಟಿಕ್ಸ್ ಪಾಲುದಾರಿಕೆಗಳು, ಪರಿಣಾಮಕಾರಿ ಡಿಜಿಟಲ್ ವ್ಯವಸ್ಥೆಗಳು ಹಾಗೂ ಸಕ್ರಿಯ ಸರಬರಾಜು ಸರಪಳಿಯಲ್ಲಿ ಮಾಡಲಾದ ತಾಂತ್ರಿಕ ಹೂಡಿಕೆಗಳಿಂದ ಇದು ಸಾಧ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಕುರಿತು ಮಾತನಾಡಿದ ಆಮ್ವೇ ಇಂಡಿಯಾದ ಗ್ಲೋಬಲ್ ಓಮ್ನಿ ಚಾನೆಲ್ ಲಾಜಿಸ್ಟಿಕ್ಸ್, ಕಸ್ಟಮರ್ ಸರ್ವಿಸಸ್ ಮತ್ತು ಉತ್ತರ ಭಾರತದ ಹಿರಿಯ ಉಪಾಧ್ಯಕ್ಷರಾದ ಸಂಜೀವ್ ಸೂರಿ, “ರಾಷ್ಟ್ರೀಯ ಸಾರಿಗೆ ವ್ಯವಸ್ಥೆಗಳೊಂದಿಗೆ ಸುಧಾರಿತ ವಿಶ್ಲೇಷಣೆಗಳು ಹಾಗೂ ಉತ್ತಮ ತಂಡದ ಸಂಯೋಜನೆಯಿಂದ ಅನೇಕ ಭೌಗೋಳಿಕ ಪ್ರದೇಶಗಳಲ್ಲಿ ಗ್ರಾಹಕರಿಗೆ ವೇಗವಾಗಿ ಹಾಗೂ ವಿಶ್ವಾಸಾರ್ಹವಾಗಿ ಸೇವೆ ನೀಡಲು ನಮಗೆ ಸಾಧ್ಯವಾಗಿದೆ. ವಿತರಣೆಯ ವೇಗ ಹೆಚ್ಚಿದಂತೆ ಗ್ರಾಹಕರ ವಿಶ್ವಾಸವೂ ವೃದ್ಧಿಯಾಗಿದೆ” ಎಂದು ಹೇಳಿದರು.

LEAVE A REPLY

Please enter your comment!
Please enter your name here