ಸುಳ್ಯ ಶಾಸಕಿಯವರ ಮಾನಹಾನಿಕರ ವರದಿ ಖಂಡನೀಯ, ದಲಿತ ದೌರ್ಜನ್ಯ ಕಾಯ್ದೆ ಅಡಿ ಬಂಧಿಸಲು ಆಗ್ರಹ

0
144

ವರದಿ ರಾಯಿ ರಾಜ ಕುಮಾರ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಶಾಸಕಿ ಕುಮಾರಿ ಭಾಗಿರಥಿ ಮುರುಳ್ಯರಿಗೆ “ಭಾವಪೂರ್ಣ ಶ್ರದ್ಧಾಂಜಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ದಲಿತ ಪರ ನಿಂದನೀಯ ಮಾತು ಬರೆದಿರುವುದು ಅತ್ಯಂತ ಖಂಡನೀಯ. ಜೀವಂತ ಇರುವಾಗಲೇ ಈ ರೀತಿಯಾಗಿ ಬರೆದಿರುವವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಬಂಧಿಸಿ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಆದಿ ದ್ರಾವಿಡ ಸಮಾಜ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಶೀನಾ ಮಾಸ್ತಿ ಕಟ್ಟೆ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜನವರಿ 12ರಂದು ಮಾತನಾಡಿದ ಅವರು ಜೀವ ಉಳಿಸಲು ಜಾತಿ ಮತ ಭೇದವಿಲ್ಲದೆ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಕರೆದೊಯ್ದು ಚಿಕಿತ್ಸೆ ನೀಡುವ ಭಾರತೀಯ ಭಾವನೆ ಇರುವವರಿಗೆ ಈ ರೀತಿ ಜೀವಂತ ಇರುವ ವ್ಯಕ್ತಿಯನ್ನು ಅವಹೇಳನ ಮಾಡಿರುವುದು ಅತ್ಯಂತ ಖಂಡನೀಯ. ಪೊಲೀಸರು ಹಾಗೂ ನ್ಯಾಯಾಲಯ ಈ ಕುಕೃತ್ಯಕ್ಕೆ ಯಾವುದೇ ರೀತಿಯ ಸಹನುಭೂತಿ ತೋರದೆ ಪ್ರಕರಣ ದಾಖಲಿಸಿ ಅತ್ಯಂತ ಕಠಿಣ ಕಾನೂನು ಕ್ರಮ ಜಗಗಿಸಬೇಕೆಂದು ಆಗ್ರಹಿಸಿರುತ್ತಾರೆ. ಇತರ ದಲಿತ ಪರ ಸಂಘಟನೆಗಳು ಈ ಬಗ್ಗೆ ಸಂಘಟಿತರಾಗಬೇಕೆಂದು ಕೇಳಿಕೊಂಡಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಮೂಡುಬಿದರೆ ಮಂಡಲ ಕಾರ್ಯದರ್ಶಿ ರಾಜು ದರೆಗುಡ್ಡೆ, ಜಯಕುಮಾರ್ ಬೆಳುವಾಯಿ, ಸತೀಶ್ ನಲ್ಕೆ ಮಾರ್, ಹಾಗೂ ತಿಮ್ಮಪ್ಪ ಮಾಸ್ತಿ ಕಟ್ಟೆ ಹಾಜರಿದ್ದರು.
.

LEAVE A REPLY

Please enter your comment!
Please enter your name here