ಮಂಜೇಶ್ವರ: ಗೃಹಿಣಿಯ ಕೊರಳಿನಲ್ಲಿದ್ದ ಶಾಲು ಡ್ರೈಂಡರ್ ಗೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ವರ್ಕಾಡಿ ಪಂಚಾಯತಿನ ಕಲ್ಮಂಜ ಗ್ರಾಮದ ಅಬ್ದುಲ್ಲ ಖಾದರ್ ಅವರ ಪತ್ನಿ ಮೈಮೂನ (40). ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೈಮೂನ ಅವರು ಕ್ರೈಂಡರ್ ನಲ್ಲಿ ಮೆಣಸು ಕಡೆಯುವಾಗ ಈ ಅನಾಹುತ ಸಂಭವಿಸಿದೆ. ಅಪಾಯಕ್ಕೆ ಸಿಲುಕಿದ್ದ ಅವರನ್ನು ಕೂಡಲೇ ಕೋಣಾಜೆ ಬಳಿಯ ಕಣಚೂರು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವರು ಮೃತಪಟ್ಟಿದ್ದರು.ಈ ಸಂಬಂಧ ಮಂಜೇಶ್ವರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.

