ಬೈಂದೂರಿನಲ್ಲಿ ಜ್ಯುವೆಲ್ಲರಿಗೆ ಕಳ್ಳರ ದಾಳಿ : ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

0
79

ಬೈಂದೂರು : ಜ್ಯುವೆಲ್ಲರಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಸಂಭವಿಸಿದೆ.

ಯಡ್ತರೆ ಗ್ರಾಮದ ಬಂಕೇಶ್ವರದ ಕಾರ್ತಿಕ್ ರಮೇಶ್ ರಾಯ್ಕ‌ರ್ ಎಂಬವರ ಬಂಕೇಶ್ವರ ರಸ್ತೆಯಲ್ಲಿರುವ ರವಿಕಲಾ ಜ್ಯುವೆಲ್ಲರ್ಸ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅಂಗಡಿಗೆ ರಿಪೇರಿಗೆ ಬಂದಿದ್ದ 12 ಗ್ರಾಂ. ತೂಕದ ಚಿನ್ನದ ನೆಕ್ಲಸ್ ಮತ್ತು 80 ಗ್ರಾಂ ತೂಕದ ಬೆಳ್ಳಿಯ ಆಭರಣಗಳಾದ 3 ಬೆಳ್ಳಿಯ ಚೈನ್, 1 ಬೆಳ್ಳಿಯ ಬ್ರಾಸ್‌ಲೈಟ್, ಬೆಳ್ಳಿಯ ಉಂಗುರ ಮತ್ತು 8ಸಾ. ರೂ. ನಗದು ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1.23ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here