ತಂತಿಬೇಲಿಗೆ ಸಿಲುಕಿಕೊಂಡಿದ್ದ ಚಿರತೆಯನ್ನು ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ , ರಕ್ಷಣೆ ಮಾಡಿದ ಘಟನೆ ಪಿಲಾತಬೆಟ್ಟು ಎಂಬಲ್ಲಿ ನಡೆದಿದೆ. ಪಿಲಾತಬೆಟ್ಟು ಗ್ರಾಮದ ನಿನ್ಯಾಲು ಎಂಬಲ್ಲಿ ತಡೆ ಬೇಲಿಗೆ ಸಿಲುಕಿಕೊಂಡಿದ್ದ , ಚಿರತೆಯನ್ನು ನೋಡಿದ ಗ್ರಾಮಸ್ಥರು ನೀಡಿದ ಮಾಹಿತಿಯಂತೆ ವೇಣೂರು ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪಿಲಿಕುಳದ ವೈದ್ಯಾಧಿಕಾರಿ ಯಶಸ್ವಿ ನಾರಾವಿ ,ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು. ಬಳಿಕ ಚಿರತೆಯನ್ನು ಸುರಕ್ಷಿತವಾಗಿ ವೇಣೂರು ಅರಣ್ಯ ಇಲಾಖೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸುಮಾರು ಒಂದುವರೆ ವರ್ಷದ ಹೆಣ್ಣು ಚಿರತೆ ಆರೋಗ್ಯವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

