ದಾವಣಗೆರೆ : ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೋಶಿಯಲ್ ವರ್ಕಸ್ ಅಸೋಸಿಯೇಷನ್, ಕರ್ನಾಟಕ ಸಾಧಕರ ಅಭಿವೃದ್ಧಿ ಮಂಡಳಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಸೀತಾರಾಮ ಶೆಟ್ಟಿ ಕಲಾಭವನದಲ್ಲಿ 08-02-2026 ರಂದು ನಡೆಯುವ ವೈಭವ ಪೂರ್ಣ ಸಮಾರಂಭದಲ್ಲಿ ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾದ ಯಕ್ಷಗಾನ ಕಲಾವಿದರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಕಲಾರಂಗ ಭೂಮಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ವಾಣಿಜ್ಯ ನಗರಿ ದಾವಣಗೆರೆಗೆ ಕರಾವಳಿ ಜಿಲ್ಲೆಗಳ ಆರಾಧನೆ ದೈವಿಕಲೆ ಯಕ್ಷಗಾನ ಕಲೆಯನ್ನು ಕಳೆದ ೪ ದಶಕಗಳಿಂದ ಮೊಟ್ಟಮೊದಲು ವೈಭವೀಕರಿಸಿದ ಶೆಣೈಯವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೋಶಿಯಲ್ ವರ್ಕಸ್ ಅಸೋಸಿಯೇಷನ್, ಕರ್ನಾಟಕ ಸಾಧಕರ ಅಭಿವೃದ್ಧಿ ಮಂಡಳಿ ಟ್ರಸ್ಟ್ನ ಪದಾಧಿಕಾರಿಗಳು ಪ್ರಕಟಿಸಿದ್ದಾರೆ.

