ಅತ್ತೂರು,ನಿಟ್ಟೆ : ದಿನಾಂಕ 18-01-2026 ನೇ ರವಿವಾರದಿಂದ 22-01-2026 ಗುರುವಾರದವರೆಗೆ ಶ್ರೀ ರಾಜರಾಜೇಶ್ವರೀ ಕ್ಷೇತ್ರ ಮತ್ತು ಸದ್ಗುರು ಶ್ರೀ ನಿತ್ಯಾನಂದ ಮಂದಿರದ ವಾರ್ಷಿಕ ಮಹೋತ್ಸವವು ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ದಿನಾಂಕ 18-01-2026ನೇ ರವಿವಾರ , ಸಂಜೆ 5-00 ಗಂಟೆಗೆ ಪ್ರಾರ್ಥನೆ, ವಾಸ್ತುಹೋಮ, ರಾಕ್ಷೆಘ್ನ ಹೋಮ, ದಿಕ್ಷಾಲ ಬಲಿ ನಡೆಯಲಿದುವುದು.
ದಿನಾಂಕ 19-01-2026ನೇ ಸೋಮವಾರ, ಬೆಳಿಗ್ಗೆ ಗಂಟೆ 7-20ಕ್ಕೆ ಧ್ವಜಾರೋಹಣ, ನಾಗಪರಿವಾರ ಹಾಗೂ ದೈವಗಳಿಗೆ ನವಕ ಕಲಶಾಭಿಷೇಕ, ಪ್ರಸನ್ನಪೂಜೆ, ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ , ಮಧ್ಯಾಹ್ನ 12-00 ಗಂಟೆಗೆ ಮಹಾಪೂಜೆ, ಸಂಜೆ 6-30ರಿಂದ ಉತ್ಸವ ಬಲಿ, ವಾಲಗ ಮಂಟಪ ಪೂಜೆ, ಅಷ್ಟಾವಧಾನ ಮಹಾರಂಗ ಪೂಜೆ, ಭೂತಬಲಿ ನಡೆಯಲಿದೆ.
20-01-2026ನೇ ಮಂಗಳವಾರ ,ಬೆಳಿಗ್ಗೆ ಗಂಟೆ 7-00ರಿಂದ ನವಕ ಪ್ರಧಾನ ಕಲಶಾಭಿಷೇಕ, ಚಂಡಿಕಾ ಹೋಮ, ಮಹಾಪೂಜೆ, ಪಲ್ಲಪೂಜೆ , ಮಧ್ಯಾಹ್ನ ಗಂಟೆ 12-30ರಿಂದ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 6-30ರಿಂದ ಉತ್ಸವ ಬಲಿ, ವಾಲಗ ಮಂಟಪ ಪೂಜೆ, ಅಷ್ಟಾವಧಾನ, ಭೂತಬಲಿ, ಕವಾಟ ಬಂಧನ ನಡೆಯಲಿರುವುದು.
ದಿನಾಂಕ 21-01-2026ನೇ ಬುಧವಾರ , ಬೆಳಿಗ್ಗೆ ಗಂಟೆ 7-00ರಿಂದ ಕವಾಟೋದ್ಘಾಟನೆ [ಇದ್ದರೆ…. ಭಕ್ತಾದಿಗಳ ತುಲಾಭಾರ ಸೇವೆ], ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ಸಂಜೆ 6-00ರಂದ ಸಂಹಾರ ಬಲಿ, ವಾಲಗ ಮಂಟಪ ಪೂಜೆ, ಅಷ್ಟಾವಧಾನ, ಓಕುಳಿ, ಅವಭೃತ , ಧ್ವಜಾವರೋಹಣ, ಮಹಾಮಂತ್ರಾಕ್ಷತೆ ನಡೆಯಲಿರುವುದು.
ದಿನಾಂಕ 22-01-2026ನೇ ಗುರುವಾರ, ಶ್ರೀ ದೇವರ ಸನ್ನಿಧಾನದಲ್ಲಿ ಬೆಳಿಗ್ಗೆ ಮಹಾಸಂಪ್ರೋಕ್ಷಣೆ, ಭಗವಾನ್ ನಿತ್ಯಾನಂದ ಗುರುಗಳಿಗೆ ಹಾಗೂ ದೈವದೇವರುಗಳಿಗೆ ವಿಶುದ್ದಿ ಕಲಶ ಹಾಗೂ ಪ್ರಸನ್ನ ಪೂಜೆ ನಡೆಯಲಿದೆ.

