ವರದಿ: ರಾಯಿ ರಾಜ ಕುಮಾರ
ಕಾರ್ಕಳದ ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಜನವರಿ 25ರಂದು ರಥಸಪ್ತಮಿ ಹಾಗೂ ಬ್ರಹ್ಮಕಲಶ ವರ್ಧಂತ್ಯುತ್ಸವ ಭಕ್ತಿಭಾವದಿಂದ ನಡೆಯಲಿದೆ.
ಈ ಪ್ರಯುಕ್ತ ಬೆಳಿಗ್ಗೆ 07.00 ಗಂಟೆಗೆ ಹಗಲು ರಥೋತ್ಸವ ಜರುಗಲಿದ್ದು, ನಂತರ 108 ತೆಂಗಿನಕಾಯಿ ಗಣಪತಿ ಹೋಮ ನಡೆಯಲಿದೆ. ಬೆಳಿಗ್ಗೆ 10.00 ಗಂಟೆಗೆ ಪೂರ್ಣಾಹುತಿ, 10.30 ಗಂಟೆಗೆ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ.
ಇನ್ನೂ ರಾತ್ರಿ 07.30 ಗಂಟೆಗೆ ಸಣ್ಣ ರಂಗಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಾಲಯದ ಮುಕ್ತೇಸರರುಗಳು ಎಲ್ಲಾ ಭಗವದ್ಭಕ್ತರಲ್ಲಿ ವಿನಂತಿಸಿದ್ದಾರೆ.

