ಚಾರ್ಮಾಡಿಘಾಟ್ ಅರಣ್ಯದಲ್ಲಿ ಭಾರೀ ಅಗ್ನಿ ಅವಘಡ

0
87

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ,ಭೀಕರ ಅಗ್ನಿ ಅವಘಡ ನಡೆದಿದೆ. ಘಾಟಿಯ ಹತ್ತಿರವಿರುವ ಮಲಯ ಮಾರುತ ಗುಡ್ಡದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಕ್ಷಣಕ್ಕೂ ಅರಣ್ಯದ ಒಳಭಾಗಕ್ಕೆ ವ್ಯಾಪಿಸುತ್ತಿದೆ.

ಮುಖ್ಯ ರಸ್ತೆಯಿಂದ ಸುಮಾರು 2 ಕಿ.ಮೀ ದೂರದ ಅರಣ್ಯದೊಳಗೆ ಬೆಂಕಿ ಹೊತ್ತಿಕೊಂಡಿರುವುದರಿಂದ , ನೂರಾರು ಎಕರೆ ಹಸಿರು ಅರಣ್ಯ ಬೆಂಕಿಗಾಹುತಿಯಾಗಿದೆ. ನೂರಾರು ಅಪರೂಪದ ಪ್ರಾಣಿ ಮತ್ತು ಪಕ್ಷಿಗಳು ಸ್ಥಳದಲ್ಲೇ ಸಜೀವ ದಹನವಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಅಧಿಕಾರಿಗಳ ಜೊತೆಗೆ ಸ್ಥಳೀಯ ಸಾರ್ವಜನಿಕರು ಕೈಜೋಡಿಸಿದ್ದು, ಬೆಂಕಿ ಇನ್ನಷ್ಟು ಹರಡದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಗಾಳಿಯ ರಭಸಕ್ಕೆ ಬೆಂಕಿಯ ಜ್ವಾಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಎಂದು ತಿಳಿದುಬಂದಿದೆ. ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.ಆಕಸ್ಮಿಕವಾಗಿ ಬೆಂಕಿ ತಗುಲಿದೆಯೇ ಅಥವಾ ಕಿಡಿಗೇಡಿಗಳು ಯಾರಾದರೂ ಬೆಂಕಿ ಹಚ್ಚಿ ದ್ದಾರೆಯೇ ಎಂಬ ಬಗ್ಗೆ ಅರಣ್ಯ ಅಧಿಕಾರಿಗಳು ತನಿಖೆ ಬಳಿಕವೇ ತಿಳಿಯಲಿದೆ.

LEAVE A REPLY

Please enter your comment!
Please enter your name here