ಪಾಲಡ್ಕ ಒಕ್ಕೂಟದ ಬೆಳ್ಳಿ ಹಬ್ಬ ಕಾರ್ಯಕ್ರಮ

0
78

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಗುರುವಾಯನಕೆರೆ ಪಾಲಡ್ಕ ಒಕ್ಕೂಟದ 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ, ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಕುಸುಮಾವತಿ ಅಧ್ಯಕ್ಷತೆಯಲ್ಲಿ ದೀಪವನ್ನು ಪ್ರಜ್ವಲಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು . ಮಾನ್ಯ ಯೋಜನಾಧಿಕಾರಿ ಅಶೋಕ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆ ನಡೆದು ಬಂದ ದಾರಿ,ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.ಯೋಜನೆಯ ಕಾರ್ಯಕ್ರಮ, ಯೋಜನೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಸಿದರು.

ಓಂಕಾರ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಹಾಗೂ ಒಕ್ಕೂಟದ ವರದಿಯನ್ನು ಸವಿತಾ ರವರು ಮಂಡಿಸಿದರು. ಒಕ್ಕೂಟದ ತಂಡದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಆಯೋಜನೆ ಮಾಡಿ ಬಹುಮಾನ ವಿತರಿಸಲಾಯಿತು.ಯೋಜನೆಯ ಮೂಲ ಪಲಾನುಭವವಿ ಗಳನ್ನು ಈ ಸಂದರ್ಭ ಗೌರವಿಸಲಾಯಿತು,ರಾಮಣ್ಣ ಗೌಡ ರವರು ಅನಿಸಿಕೆ ವಕ್ತಪಡಿಸಿದರು, ದರಣಪ್ಪ, ಕುಲಾಲ್ ಸುಮತಿ ದಂಪತಿಗಳಿಗೆ ಗೌರವಿಸಲಾಯಿತು.

ಶ್ರೀಯುತ ಅನ0ತ್ರಾಮ ಗೌಡ,ಪಳ್ಳ ತಳ ರವರ ಕಾರ್ಯಕ್ರಮ ಉದ್ದೇಶಿಸಿ, ಯೋಜನೆಯಿಂದ್ ಸಿಗುವ ಸೌಲಭ್ಯ ವನ್ನು ನಾವು ಸರಿಯಾದ ಉದ್ದೇಶ ಕ್ಕೆ ನಾವು ಬಳಕೆ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋಪಾಲ ಕೋಲಾಜೆ,( ಜನಜಾಗೃತಿ ವೇದಿಕೆ ಅಧ್ಯಕ್ಷರು) ಮಡಂತ್ಯಾರ್ ವಲಯ ಅಧ್ಯಕ್ಷರು ಜಯ ಪೂಜಾರಿ, sdmc ಅಧ್ಯಕ್ಷರು ಪ್ರೀತ ಕುಮಾರ ಕುದ್ರಡ್ಕ ಒಕ್ಕೂಟದ ಅಧ್ಯಕ್ಷರು ವಿಜಯ್,ಹಾಗೂ ಡೊಮ್ಮಯ್ಯ ಶೆಟ್ಟಿಗಾರ್, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಮೇಲ್ವಿಚಾರಕರು ಕೇಶವ, ಸೇವಾಪ್ರತಿನಿಧಿ ನಂದಿನಿ, ಪರಮೇಶ್ವರ್, ಕಲಾವತಿ, ವಿಪತ್ತು ಘಟಕದ ಸ್ವಯಂ ಸೇವಕರು ಅವಿನಾಶ ಹಾಗೂ ಕಾರ್ಯಕ್ರಮ ವನ್ನು ಪುಪ್ಪ ನಿರೂಪಣೆ ಮಾಡಿದರು ಶುಭಲತಾ ಸ್ವಾಗತಿಸಿದರು, ಅನುಪಮಾ ಧನ್ಯವಾದ ಮಾಡಿದರು ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಯಿತು.

LEAVE A REPLY

Please enter your comment!
Please enter your name here