ಮೂಡುಬಿದಿರೆ : ಕಾರ್ಮಿಕರಿಗೆ ಕಾನೂನು ಮಾಹಿತಿ ಮತ್ತು ತಾಲೂಕು ಸಮಾವೇಶ

0
58

ವರದಿ ರಾಯಿ ರಾಜ ಕುಮಾರ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಮೂಡುಬಿದಿವೆ ತಾಲೂಕು ಸಮಿತಿಯು ಕಟ್ಟಡ ಕಾರ್ಮಿಕರಿಗೆ ಕಾನೂನು ಮಾಹಿತಿ ಮತ್ತು ತಾಲೂಕು ಸಮಾವೇಶವನ್ನು ಸಮಾಜಮಂದಿರದಲ್ಲಿ ಜನವರಿ 19ರಂದು ಹಮ್ಮಿಕೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ ಆರ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾನೂನು ಮಾಹಿತಿಗಳನ್ನು ಒದಗಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ 2006ರಲ್ಲಿ ಜಾರಿಗೆ ಬಂದ ಕಟ್ಟಡ ಕಾರ್ಮಿಕರ ಉದ್ಯೋಗ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಕ್ರೂಢೀಕರಣದ ವಿಚಾರವಾಗಿ ಪ್ರಸ್ತಾಪಿಸಿದರು.

ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ನಿರ್ಮಾಣ ಮಾಲೀಕರುಗಳು ಹಣವನ್ನು ಒದಗಿಸುತ್ತಿದ್ದಾರೆ. ಕಟ್ಟಡ ರಚನೆಯ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿಗಳು ಮತ್ತು ನಿರೀಕ್ಷಕರು ಭೇಟಿ ಇತ್ತು ಕಟ್ಟಡದ ರಚನಾಮೌಲ್ಯವನ್ನು ನಿರ್ಧರಿಸುತ್ತಾರೆ. ಅದರ ಆಧಾರದಲ್ಲಿ ಸುಂಕವನ್ನು ಸರಕಾರಕ್ಕೆ ಸಂದಾಯವಾಡುವ ಮಾಡುವ ಮೂಲಕ ಕಾರ್ಮಿಕರ ಕಲ್ಯಾಣಕ್ಕೆ ಹಣವನ್ನು ಸಂಗ್ರಹಿಸಲಾಗುತ್ತದೆ ಇದಕ್ಕೆ ಎಲ್ಲ ಪಂಚಾಯತ್ಗಳು ಸಹಕರಿಸಬೇಕು ಎಂದು ಕೇಳಿಕೊಂಡರು.

ಸಭೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಗ್ರಾಮ ಸಮಿತಿಯ ಮುಖಂಡರುಗಳು ಹಾಜರಿದ್ದು ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಂಡರು. ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಕುಮಾರ್, ಸಿಡಬ್ಲ್ಯೂಎಫ್ ಐ ನ ದಕ್ಷಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ ಯಾದವ ಶೆಟ್ಟಿ, ಸಿ ಐ ಟಿ ಯು ಉಪಾಧ್ಯಕ್ಷೆ ರಮಣಿ, ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಸಿ ಐ ಟಿ ಯು ಮೂಡುಬಿದಿರೆ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಪುತ್ತಿಗೆ ಪಂಚಾಯತ್ ಅಧ್ಯಕ್ಷೆ ರಾಧಾ ಹಾಜರಿದ್ದರು.

ಕಾರ್ಮಿಕ ಫೆಡರೇಶನ್ ನ ಪ್ರಥಮ ಕಾರ್ಯದರ್ಶಿ, ಶಂಕರ ವಾಲ್ಪಾಡಿ ಸ್ವಾಗತಿಸಿದರು. ಸಿಡಬ್ಲ್ಯೂಎಫ್ ಐ ನ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಕಾರ್ಯಕ್ರಮ ನಿರ್ವಹಿಸಿದರು.
.

LEAVE A REPLY

Please enter your comment!
Please enter your name here