ಜ.25ರಂದು ಮಣಿಪುರ ಸಾವಿರಾಳು ಶ್ರೀ ಧೂಮಾವತಿ ಹಾಗೂ ಬಂಟ ದೈವದ ವಾರ್ಷಿಕ ನೇಮೋತ್ಸವ

0
60

ಉಡುಪಿ : ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಣಿಪುರ ಸಾವಿರಾಳು ಶ್ರೀ ಧೂಮಾವತಿ ಹಾಗೂ ಬಂಟ ದೈವದ ವಾರ್ಷಿಕ ನೇಮೋತ್ಸವವು ದಿನಾಂಕ 25-01-2026 (ಆದಿತ್ಯವಾರ) ರಂದು ಧಾರ್ಮಿಕ ಸಂಪ್ರದಾಯದಂತೆ ಜರಗಲಿದೆ.

ನೇಮೋತ್ಸವದ ಅಂಗವಾಗಿ ಮಧ್ಯಾಹ್ನ 12.00 ಗಂಟೆಗೆ ಚಪ್ಪರ ಮೂರ್ತ ನೆರವೇರಲಿದ್ದು, ನಂತರ ಮಧ್ಯಾಹ್ನ 12.30ಕ್ಕೆ ಮಣಿಪುರ ಬಡಗು ಮನೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7.00 ಗಂಟೆಗೆ ದೈವದ ಭಂಡಾರ ಇಳಿದು, ರಾತ್ರಿ 10.00 ಗಂಟೆಗೆ ಸರಿಯಾಗಿ ನೇಮೋತ್ಸವ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಸಕುಟುಂಬ ಸಮೇತರಾಗಿ ಭಾಗವಹಿಸಿ, ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಸ್ಥಳವಂದಿಗರು, ಗ್ರಾಮಸ್ಥರು ಹಾಗೂ ಮಣಿಪುರ–ಬಡಗು ಮನೆ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here