ಫೆ.5-6 ರವರೆಗೆ ಶತಚಂಡಿಕಾ ಯಾಗ ಹಾಗೂ ನವೀಕೃತ ರಾಜಾಂಗಣದ ಲೋಕಾರ್ಪಣೆ

0
53

ಬೆಳ್ತಂಗಡಿ ,ಶಿವಾಜೆ : ಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಶಿಬಾಜೆ, ಶ್ರೀ ಶೃಂಗೇರಿ ಜಗನ್ನಾತೆಯ, ಪೂಜ್ಯ ಶ್ರೀ ಜಗದ್ಗುರುಗಳ ಪೂರ್ಣಾನುಗ್ರಹದೊಂದಿಗೆ ಹಾಗೂ ರಾಜರ್ಷಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದದೊಣದಿಗೆ , ಫೆ.05 ಗುರುವಾರ ಮತ್ತು 06 ಶುಕ್ರವಾರದಂದು ಶ್ರೀಕ್ಷೇತ್ರ ಮೊಂಟೆದಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಲೋಕಕಲ್ಯಾಣಾರ್ತ ಶತಚಂಡಿಕಾ ಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಲಿದೆ.

ದೈವಜ್ಞ ಶ್ರೀ ಶ್ರೀಧರ ಗೋರೆಯವರು ನೀಡಿದ ಮುಹೂರ್ತದಲ್ಲಿ , ಹಿರಿಯ ವೇದ ವಿದ್ವಾಂಸರಾದ ಶ್ರೀ ಪಾಂಡುರಂಗ ಅಭ್ಯಂಕರ್ ಬೂಡುಮುಗೇರು ಹಾಗೂ ಶ್ರೀ ಶಂಕರ ವೇದ ವಿದ್ಯಾ ಗುರುಕುಲದ ಪ್ರಾಚಾರ್ಯರಾದ ಘನಪಾಠಿ ಶ್ರೀ ಆಂಶುಮಾನ್ ಅಭ್ಯಂಕರ್ ದರ್ಭೆತಡ್ಡ ಇವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರದ ತಂತ್ರಿ ವರ್ಯರಾದ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಲಿರುವುದು.

ಶ್ರೀ ಶಂಕರ ವೇದ ವಿದ್ಯಾ ಗುರುಕುಲದ ಪ್ರಾಚಾರ್ಯರಾದ ಘನಪಾಠಿ ಶ್ರೀ ಆಂಶುಮಾನ್ ಅಧ್ಯಂಕ‌ರ್ ದರ್ಭತಡ್ಡ ಇವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರದ ತಂತ್ರವರ್ಯರಾದ ಕಮ್ಮಿಂಜಿ ಶ್ರೀ ನಾಗೇಶ ತಂತ್ರಿಗಳ ಉಪಸ್ಥಿತಿಯಲ್ಲಿ ಜರುಗಲಿರುವುದು.

ವೈದಿಕ ಕಾರ್ಯಕ್ರಮಗಳು

ದಿನಾಂಕ: 05-02-2026 ಗುರುವಾರದಂದು

ಬೆಳಿಗ್ಗೆ ಗಂಟೆ 7.00ಕ್ಕೆ ವೇದಘೋಷಪೂರ್ವಕ ದೇವತಾ ಪ್ರಾರ್ಥನೆ ಅವಿಘ್ನ ಗಣಪತಿ ಪೂಜೆ, ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್‌ರಣ – ಮಧುಪರ್ಕ, ಬೆಳಿಗ್ಗೆ ಗಂಟೆ 9.00ಕ್ಕೆ ನವೀಕೃತ ರಾಜಾಂಗಣ ಉದ್ಘಾಟನೆ, ಭಜನಾ ಸೇವೆ ಆರಂಭ, ಬೆಳಿಗ್ಗೆ ಗಂಟೆ 9.30ಕ್ಕೆ ಶ್ರೀಕ್ಷೇತ್ರ ದೈವಗಳಿಗೆ ತಂಬಿಲ, ಶ್ರೀಸೂಕ್ತ ಪಾರಾಯಣ, ಅಥರ್ವಶೀರ್ಷ ಪಾರಾಯಣ, ಪ್ರಾಸಾದ ಶುದ್ದಿ, ಸಗ್ರಹ ಅಷ್ಟೋತ್ತರಶತ ಮೋದಕ ಹೋಮ. ಬೆಳಿಗ್ಗೆ ಗಂಟೆ 10.00ಕ್ಕೆ ಯಾಗಶಾಲಾ ಚತುರ್ದ್ವಾರ ಪೂಜೆ, ಕಲಶಾರಾಧನೆ, ದೇವತಾ ಸ್ಥಾಪನೆ, ದೇವೀ ಸೂಕ್ತ ಪಾರಾಯಣ, ಚತುಃಷಷ್ಟಿ ಯೋಗಿನೀ ಪೂಜೆ, ಕ್ಷೇತ್ರದ ದೇವರಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ , ಸಂಜೆ ಗಂಟೆ 4.00ಕ್ಕೆ ಅರಣಿ ಮಥನ, ಅಗ್ನಿಜನನ, ಕುಂಡ ಸಂಸ್ಕಾರ, ಅಗ್ನಿ ಪ್ರತಿಷ್ಠೆ, ವೇದ ಪಾರಾಯಣ, ಸಂಜೆ ಗಂಟೆ 6.00ಕ್ಕೆ ಕಲಶಾರಾಧನೆ, ಅಷ್ಟಾವಧಾನ ಸೇವೆ, ಶ್ರೀಕ್ಷೇತ್ರದ ದೇವರಿಗೆ ರಂಗಪೂಜೆ,ರಾತ್ರಿ ಗಂಟೆ 8.00ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿರುವುದು.

ದಿನಾಂಕ 06-02-2026 ಶುಕ್ರವಾರದಂದು

ಬೆಳಿಗ್ಗೆ 6.30ಕ್ಕೆ ಉಷಃಕಾಲ ಪೂಜೆ, ದುರ್ಗಾಯಂತ್ರಮಂಡಲ ಪೂಜೆ, ಪೂರ್ವಾಂಗ ಹೋಮ ಪ್ರಯೋಗ, ಚಂಡಿಕಾಹೋಮ, ತರ್ಪಣ, ಬಲಿದಾನ, 11 ಕ್ಕೆ ಪೂರ್ಣಾಹುತಿ, ಸುವಾಸಿನೀ, ಕುಮಾರಿಕಾ, ದಂಪತಿ ಪೂಜೆ, ಕರ್ಮ ಸಮಾಪ್ತಿ, ಫಲಮಂತ್ರಾಕ್ಷತೆ, ಆಶೀರ್ವಚನ, ಶ್ರೀ ದೇವರಿಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

LEAVE A REPLY

Please enter your comment!
Please enter your name here