ಉಡುಪಿ ಶ್ರೀಕೃಷ್ಣ ಮಠದಲ್ಲಿ ಹಸಿರು ಕ್ರಾಂತಿಯ ಸಂಕಲ್ಪ : ಶ್ರೀಗಳಿಗೆ 102 ಗಂಧದ ಗಿಡಗಳ ‘ಪರಿಸರ ತುಲಾಭಾರ’

0
80

ವರದಿ : ಮಂದಾರ ರಾಜೇಶ್ ಭಟ್

ಉಡುಪಿ: ಧಾರ್ಮಿಕ ನಗರಿ ಉಡುಪಿ ಇಂದು ವಿಶಿಷ್ಟ ಹಾಗೂ ಪರಿಸರ ಪೂರಕ ಕಾರ್ಯಕ್ರಮವೊಂದು ಸಾಕ್ಷಿಯಾಯಿತು. ತುಳುವ ಮಹಾಸಭೆ ಹಾಗೂ ಕಲ್ಕೂರ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ, ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಗಳಿಗೆ 102 ಶ್ರೀಗಂಧದ ಗಿಡಗಳ ತುಲಾಭಾರ ಸೇವೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

​ಕಾರ್ಯಕ್ರಮದ ಮುಖ್ಯಾಂಶಗಳು

​ ತುಳುವ ಮಹಾಸಭೆಯ ಸಂಚಾಲಕರಾದ ಮಾಧವ ಉಳ್ಳಾಲ ಅವರ ನೇತೃತ್ವದಲ್ಲಿ ಈ ಅಭಿನಂದನೀಯ ಕಾರ್ಯಕ್ರಮ ಆಯೋಜನೆಗೊಂಡಿತ್ತು.

​ಪರಿಸರ ಪ್ರೇಮ– ಸಾಂಪ್ರದಾಯಿಕ ವಸ್ತುಗಳ ಬದಲಾಗಿ, ಪ್ರಕೃತಿಯ ಸಂರಕ್ಷಣೆಯ ಸಂದೇಶ ಸಾರಲು 102 ಗಂಧದ ಗಿಡಗಳನ್ನು ಬಳಸಿ ತುಲಾಭಾರ ನಡೆಸಿದ್ದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಗಣ್ಯರ ಉಪಸ್ಥಿತಿ-ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಯುಗಪುರುಷ ಕಿನ್ನೆಗೋಳಿ, ಎಂ. ಬಿ. ಪುರಾಣಿಕ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ.
ಶಿವರಾಮ ಶೆಟ್ಟಿ ಉಡುಪಿ, ತುಳುವ ಮಹಾಸಭೆಯ ಕಾರ್ಯನಿರ್ವಾಹಕ ಸಂಚಾಲಕ ಹಾಗೂ ತುಳು ವರ್ಲ್ಡ್ ಫೌಂಡೇಶನ್ ಕಾರ್ಯದರ್ಶಿ, ‘ತುಳುವ ಬೊಳ್ಳಿ’ ಜಿ.ಕೆ. ಹರಿಪ್ರಸಾದ್ ರೈ ಕಾರಮೊಗರು ಗುತ್ತು.
​ಸಹ್ಯಾದ್ರಿ ನರ್ಸರಿ (ಪಂಪ್‌ವೆಲ್) ಮಾಲೀಕರಾದ ರಮೇಶ್, ಉಡುಪಿ ತುಳುವ ಮಹಾಸಭೆ ಸಂಚಾಲಕರಾದ ದಯಾನಂದ ಕಲ್ಮಾಡಿ, ಪ್ರಮುಖರಾದ ಸುಜಯ ಶೆಟ್ಟಿ ಸುರತ್ಕಲ್, ರೇಖಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

​”ದೈವದತ್ತವಾದ ಪ್ರಕೃತಿಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಶ್ರೀಗಳ ಆಶೀರ್ವಾದದೊಂದಿಗೆ ಪರಿಸರ ಸಂರಕ್ಷಣೆಯ ಈ ಪ್ರಯತ್ನ ಜನರಲ್ಲಿ ಜಾಗೃತಿ ಮೂಡಿಸಲಿ” ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.

LEAVE A REPLY

Please enter your comment!
Please enter your name here