ಮೊದಲ ಮಾದರಿ ಸ್ವಸಹಾಯ ತಂಡದ ನಿರ್ಮಾಣದತ್ತ ಉಡುಪಿ ತುಳುವ ಮಹಾಸಭೆ

0
38

ತುಳುವರ್ಲ್ಡ್ ಫೌಂಡೇಶನ್‌ನ ಕಮ್ಯುನಿಟಿ ಡೆವಲಪ್ಮೆಂಟ್ ಪರಿಕಲ್ಪನೆಯ ಭಾಗವಾಗಿ, ಗ್ರಾಮೀಣ ಜನರ ಸ್ವಾವಲಂಬಿ ಬದುಕಿನ ಕನಸನ್ನು ಸಾಕಾರಗೊಳಿಸುವ ಉದ್ದೇಶದೊಂದಿಗೆ 2026ರ ಹೊಸ ಯೋಜನೆಗಳ ಅಂಗವಾಗಿ ಉಡುಪಿ ತುಳುವ ಮಹಾಸಭೆಯು ಉಡುಪಿ ಜಿಲ್ಲೆಯಲ್ಲಿ ಮೊದಲ ಮಾದರಿ ಸ್ವಸಹಾಯ ತಂಡವನ್ನು 19-01-2026ರಂದು ಪೆರ್ಡೂರು ಗ್ರಾಮದಲ್ಲಿ ಯಶಸ್ವಿಯಾಗಿ ಆರಂಭಿಸಿತು.

ಈ ಮಹತ್ವದ ಕಾರ್ಯಕ್ಕೆ ತುಳುವರ್ಲ್ಡ್ ಫೌಂಡೇಶನ್ ನ ಸಂಸ್ಥಾಪಕರೂ ನಿರ್ದೇಶಕರೂ ಆದ ಡಾ. ರಾಜೇಶ್ ಆಳ್ವ ಅವರು ಮಾರ್ಗದರ್ಶನ ನೀಡಿದರು. ಪ್ರಧಾನ ಸಂಚಾಲಕರಾದ ಪ್ರಮೋದ್ ಸಪ್ರೆ, ಕಾರ್ಯದರ್ಶಿಗಳಾದ ಹರಿಪ್ರಸಾದ್ ರೈ, ಉಡುಪಿ ತುಳುವ ಮಹಾಸಭಾದ ಪ್ರಧಾನ ಸಂಚಾಲಕರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಚಾಲಕರಾದ ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು, ಸುಂದರ್ ಶೆಟ್ಟಿ, ಉಲ್ಲಾಸ್, ಬಾಲಕೃಷ್ಣ, ರಕ್ಷಿತ್, ರಂಜಿತ್, ಶಿವಪ್ರಸಾದ್ ಹಾಗೂ ಸದಸ್ಯರಾದ ಪ್ರಸನ್ನ, ಪ್ರಶಾಂತ್, ಸುನಂದಾ, ಜ್ಯೋತಿ, ಶಶಿಕಲಾ, ಶರ್ಮಿಳಾ, ಆಶಾ, ಸುರೇಶ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಂಡ ರಚನೆಯ ಬಳಿಕ ಸರ್ವಾನುಮತದಿಂದ,ಅಧ್ಯಕ್ಷರಾಗಿ – ಪ್ರಶಾಂತ್,ಉಪಾಧ್ಯಕ್ಷರಾಗಿ – ಆಶಾ,ಕಾರ್ಯದರ್ಶಿಯಾಗಿ – ಸೌಮ್ಯರಾಣಿ ವಿಶ್ವನಾಥ್,ಜೊತೆ ಕಾರ್ಯದರ್ಶಿಯಾಗಿ – ರಕ್ಷಿತ್,ಖಜಾಂಚಿಯಾಗಿ – ಸುಂದರ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸ್ವಸಹಾಯ ತಂಡವು ತುಳುವರ್ಲ್ಡ್ ಫೌಂಡೇಶನ್‌ನ ಸಮುದಾಯ ಅಭಿವೃದ್ಧಿ ಧ್ಯೇಯಕ್ಕೆ ಅನುಗುಣವಾಗಿ, ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಸ್ವಾವಲಂಬನೆ, ಪರಸ್ಪರ ಸಹಕಾರ ಹಾಗೂ ಸಮುದಾಯ ಶಕ್ತಿಕರಣಕ್ಕೆ ಮಾದರಿಯಾಗಿ ಬೆಳೆಯಲಿದೆ ಎಂಬ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here