ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯಲ್ಲಿ ಕಳೆದ 11 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಸ್ವಂತ ಕೇಂದ್ರ ಕಚೇರಿ ಜನವರಿ 22ರಂದು ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ರಿಂದ ಉದ್ಘಾಟನೆಗೊಂಡಿತು. ಅವರು ಭದ್ರತಾ ಕೋಶದಲ್ಲಿ ಹಣವನ್ನು ಇಟ್ಟು, ತಮ್ಮ ಉದ್ಘಾಟನಾ ಭಾಷಣದಲ್ಲಿ 12ನೇ ವರ್ಷದಲ್ಲಿ 12 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿರುವುದು ಬಹಳ ಸಂತಸ ಕರ ಸಂಗತಿ. ಸಾಕಷ್ಟು ಸ್ವಸಹಾಯ ತಂಡದವರಿಗೆ ಅನಾರೋಗ್ಯ, ವಿದ್ಯಾಭ್ಯಾಸ, ಮನೆ ನಿರ್ಮಾಣ, ಶೌಚಾಲಯದಂತಹ ಅಗತ್ಯಗಳಿಗೆ ಸ್ಪಂದಿಸುತ್ತಿರುವ ಸಂಘಕ್ಕೆ ಶುಭವನ್ನು ಹಾರೈಸಿ ಶಾಖೆಗಳು ಇತರ ಪ್ರದೇಶಗಳಲ್ಲಿ ತೆರೆಯುವಂತಾಗಲಿ ಎಂದು ಶುಭನುಡಿದರು.

ದೀಪ ಬೆಳಗಿ ಶುಭ ಆಶೀರ್ವಾದ ಗೈದ ಮೂಡುಬಿದಿರೆ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯಾಂಗರಿಗೆ, ಸೈನಿಕರಿಗೆ, ಹಿರಿಯ ನಾಗರಿಕರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುವುದರೊಂದಿಗೆ ದಿನನಿತ್ಯದ ವ್ಯವಹಾರಕ್ಕೆ ಬೇಕಾದ ಧನವನ್ನು ಹೆಚ್ಚಿನ ಮಟ್ಟದಲ್ಲಿ ಒದಗಿಸಿ, ಸ್ವಂತ ಕಟ್ಟಡವನ್ನು ಹೊಂದಿರುವ ಸಂಘ ಇನ್ನಷ್ಟು ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ವಿಕಾಸ್ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಜೆ ಪಾಲೇಮಾರ್ ಮಾತನಾಡಿ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಣೆಯಿಂದ ಹೆಚ್ಚಿನ ಸೌಲಭ್ಯ ಗ್ರಾಹಕರಿಗೂ ದೊರಕುವಂತಾಗಲಿ, ಮುಂದಿನ 10 ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಶಾಖೆಗಳು ಸಮೀಪದ ಊರುಗಳಲ್ಲಿ ತೆರೆಯುವಂತಾಗಲಿ ಎಂದು ಹಾರೈಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತನಾಡಿ ಸಹಕಾರಿ ಹಣವನ್ನು ಸಾರ್ವಜನಿಕ ಉಪಯೋಗಿಗಳಲ್ಲಿ ತೊಡಗಿಸಿ ಬೆಂಬಲಿಸುತ್ತಿರುವ ಸಂಘವು ಹನ್ನೆರಡು ಶೇಕಡ ಡಿವಿಡೆಂಡ್ ನೀಡುವುದರೊಂದಿಗೆ ಸ್ವಂತ ಕಟ್ಟಡವನ್ನು ಕಂಡುಕೊಂಡಿರುವುದು ಬಹಳ ಸಂತಸಗರ ಸಂಗತಿ, ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.
ಚೌಟರ ಅರಮನೆ ಕುಲದೀಪ್ ಎಂ, ಉದ್ಯಮಿ ಶ್ರೀಪತಿ ಭಟ್, ಡಾ. ಅಮರ ಶ್ರೀ ಶುಭ ಹಾರೈಸಿದರು. ಶ್ರೇಷ್ಠ ಡೆವಲಪರ್ಸ್ ನ ಮೇಘನಾಥ ಶೆಟ್ಟಿ, ಉದ್ಯಮಿ ಅಬುಲಾಲ್ ಪುತ್ತಿಗೆ, ಅಶ್ವಿನಿ ಜೆ ಪಿರೇರಾ, ಹಾಜರಿದ್ದರು.
ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರುಗಳಾದ ಸುರೇಶ್ ಪೂಜಾರಿ, ರವೀಂದ್ರ ಕರ್ಕೇರ, ಗೋಪಾಲ್ ಶೆಟ್ಟಿ ಗಾರ್, ರಾಜೇಂದ್ರ ಬಿ, ಶರತ್ ಜೆ ಶೆಟ್ಟಿ, ಉಷಾ ಭಂಡಾರಿ, ರತ್ನಾಕರ ಪೂಜಾರಿ, ನಾಗೇಶ್ ನಾಯ್ಕ, ಮೀನಾಕ್ಷಿ ಅಂಚನ್ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು ರಾಜಶೇಖರ ಮಧ್ಯಸ್ಥ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ರಮೇಶ್ ಶೆಟ್ಟಿ ವಂದಿಸಿದರು.

.

