ಬಂಟ್ವಾಳ : ಇಲ್ಲಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜ.31ರಂದು ಬ್ರಹ್ಮ ಬೈದರ್ಕಳ ಜಾತ್ರೆ ನಡೆಯಲಿದೆ. ಜ.28ರಂದು ಸಂಜೆ ಗಂಟೆ 4.30ಕ್ಕೆ ಸಾಂಪ್ರದಾಯಿಕ ಅಂಕ ಚೆಂಡು ಬಳಿಕ ರಾತ್ರಿ 10 ಗಂಟೆಗೆ ಪಂಜಿಕಲ್ಲು ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಮತ್ತು ಕೇಲ್ದೋಡಿ ಗುತ್ತು ಕೋಟಿ ಪೂಜಾರಿ ಮನೆಯಿಂದ ಬ್ರಹ್ಮಬೈದರ್ಕಳ ಭಂಡಾರ ಬರಲಿದೆ. ಅಂದು ರಾತ್ರಿ 7 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪುಂಜಾಲಕಟ್ಟೆ ಕಲಾವಿದರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಜ.29ರಂದು ಸಂಜೆ 3 ಗಂಟೆಗೆ ಸಂಕ್ರಾಂತಿ ಸೇವೆ, 4.30ಕ್ಕೆ ಅಂಕ ಚೆಂಡು, ರಾತ್ರಿ 7 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಕೇಲ್ದೋಡಿಗುತ್ತಿನಿಂದ ದೈವದ ಭಂಡಾರ ಬಂದು ನೇಮೋತ್ಸವ ನಡೆಯಲಿದೆ.
ಜ.30ರಂದು ಸಂಜೆ ಗಂಟೆ 4.30ಕ್ಕೆ ಅಂಕ ಚೆಂಡು, ರಾತ್ರಿ 7 ಗಂಟೆಗೆ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳರಿಗೆ ಸಂಕ್ರಾಂತಿ ಸೇವೆ, ರಾತ್ರಿ 9 ಗಂಟೆಗೆ ಸ್ಥಳೀಯ ಆದಿನಾಥ ಬಸದಿಯಲ್ಲಿ ಪಂಚಾಮೃತ ಅಭಿಷೇಕ, ರಾತ್ರಿ 10 ಗಂಟೆಗೆ ಕೊಡಮಣಿತ್ತಾಯ ದೈವಕ್ಕೆ ನೇಮೋತ್ಸವ ಸಹಿತ ಬ್ರಹ್ಮಬಲಿ ಮತ್ತು ಇರುಳು ದೈವಗಳಿಗೆ ನೇಮ ನಡೆಯಲಿದೆ.
ಜ.31ರಂದು ರಾತ್ರಿ ಗಂಟೆ 8.30ಕ್ಕೆ ಬೈದರ್ಕಳರು ಒಲಿಮರೆಯಿಂದ ಹೊರಟು, ರಾತ್ರಿ ಗಂಟೆ 10.30ಕ್ಕೆ ಬಾಕಿಮಾರು ಗದ್ದೆಗೆ ಇಳಿಯುವುದು. ಇದೇ ವೇಳೆ ಸಂಗೀತ ರಸಮಂಜರಿ ನಡೆಯಲಿದ್ದು, ರಾತ್ರಿ 12 ಗಂಟೆಗೆ ಕೊಡಮಣಿತ್ತಾಯ-ಬೈದರ್ಕಳ ಕಡಸಾಲೆ ಬಲಿ, 2 ಗಂಟೆಗೆ ಬ್ರಹ್ಮರ ಬಲಿ, 4 ಗಂಟೆಗೆ ಬೈದರ್ಕಳ ಪಾತ್ರಗಳು ಸುರ್ಯ ಹಾಕಿಕೊಳ್ಳುವುದು, ಮುಂಜಾನೆ 5 ಗಂಟೆಗೆ ಬೈದರ್ಕಳರು ಬಾಕಿಮಾರಿನಿಂದ ಗರಡಿಗೆ ಬಮದು ಸುರ್ಯ ಹಾಕಿಕೊಳ್ಳುವುದು ಮತ್ತು ಮಾಯಂದಾತಿ ದೇವಿ ಉತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಪ್ರಕಾಶ್ ಕುಮಾರ್ ಜೈನ್ ತಿಳಿಸಿದ್ದಾರೆ.
