ಪುತ್ತೂರು : ತಂದೆಗೆ ಚೂರಿ ಇರಿದು, ಶೂಟೌಟ್‌ನಲ್ಲಿ ಜೀವ ಕಳೆದುಕೊಂಡ ಬಾಲಕ

0
101

ರಾಮಕುಂಜ ಗ್ರಾಮದ ಪಾದೆ ಪರಿಸರದಲ್ಲಿ ಭೀಕರ ಹಾಗೂ ಅಘಾತಕಾರಿ ಘಟನೆಯೊಂದು ನಡೆದಿದೆ. ತಂದೆಯೊಂದಿಗೆ ಉಂಟಾದ ಜಗಳದ ಪರಿಣಾಮ ತಂದೆಗೆ ಚೂರಿಯಿಂದ ಇರಿದು ತಾನು ಮನೆಯಲ್ಲಿದ್ದ ಕೋವಿಯಿಂದ ಸ್ವತಃ ಶೂಟೌಟ್ ಮಾಡಿಕೊಂಡ ಘಟನೆ ಶನಿವಾರ ಸಂಭವಿಸಿದೆ.

ರಾಮಕುಂಜ ಸಮೀಪದ ಪಾದೆ ನಿವಾಸಿ ವಸಂತ್ ಅಮೀನ್ ಅವರ ಪುತ್ರ ಮೋಕ್ಷ ಈ ಘಟನೆಯಲ್ಲಿ ಮೃತಪಟ್ಟ ಬಾಲಕನಾಗಿದ್ದು, ಯಾವುದೋ ಕಾರಣಕ್ಕೂ ತಂದೆ ಹಾಗೂ ಮಗನ ನಡುವೆ ಜಗಳ ಏರ್ಪಟ್ಟಿದ್ದು ಈ ಸಂಧರ್ಭದಲ್ಲಿ ಮಗ ಮೋಕ್ಷ ತನ್ನ ತಂದೆಗೆ ಚೂರಿಯಿಂದ ಇರಿದು, ಆ ಬಳಿಕ ಮನೆಯಲ್ಲಿದ್ದ ಕೋವಿಯಿಂದ ತಾನೇ ಶೂಟೌಟ್ ಮಾಡಿಕೊಂಡು ಮೃತಪಟ್ಟ ಘಟನೆ ನಡೆದಿದೆ.

ವಸಂತ್ ಅಮೀನ್ ಮೂಲತಃ ಕೇರಳ ಭಾಗದವಾರಾಗಿದ್ದು ರಾಮಕುಂಜದ ಪಾದೆ ಪರಿಸರದಲ್ಲಿ ಜಾಗ ಖರೀದಿಸಿ ಮಗ ಮೋಕ್ಷನೊಂದಿಗೆ ವಾಸವಾಗಿದ್ದು, ಮೋಕ್ಷ ಮಂಗಳೂರಿನ ಖಾಸಗೀ ವಿದ್ಯಾಸಂಸ್ಥೆಯಲ್ಲಿ ಓದುತ್ತಿದ್ದ ಬಾಲಕ ಎಂದು ತಿಳಿದು ಬಂದಿದೆ. ಸುಮಾರು 17 ವರ್ಷದ ಪ್ರಾಯದ ಬಾಲಕ ಎಂದು ಅಂದಾಜಿಸಲಾಗಿದೆ.

ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ , ಪೋಲಿಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಯಲ್ಲಿ ಸತ್ಯಾಂಶ ಹೊರಬರಬೇಕಾಗಿದೆ. ತಂದೆಯ ಸ್ಥಿತಿ ಗಂಭೀರವಾಗಿದ್ದು ಮಂಗಳೂರಿನ ಖಾಸಗೀ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here